ಪಂಜಾಬ್ : ಆಪರೇಷನ್ ಸಿಂಧೂರ್ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಬೇಟಿ ನೀಡಿದ್ದಾರೆ. ಪಂಜಾಬಿನ ಆದಂಪುರ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಆದಂಪುರ ಏರ್ ಬೇಸ್ ನಲ್ಲಿ ಪ್ರಧಾನಿ ಮೋದಿ ಸೈನಿಕರ ಉದ್ದೇಶಿಸಿ ಮಾತನಾಡಿ, ಭಾರತ್ ಮಾತಾ ಕೀ ಅನ್ನೋದು ಉದ್ಘೋಷ ಅಷ್ಟೇ ಅಲ್ಲ. ಇದು ದೇಶದ ಪ್ರತಿಯೊಬ್ಬ ಸೈನಿಕರ ಶಪಥವಾಗಿದೆ. ಇಡೀ ದೇಶದ ನಾಗರೀಕರ ಧ್ವನಿಯಾಗಿದೆ. ಭಾರತ್ ಮಾತಾ ಕೀ ಜೈ ಅನ್ನು ತಾಕತ್ತನ್ನು ಇಡೀ ವಿಶ್ವವೇ ನೋಡಿದೆ. ಅಣ್ವಸ್ತ್ರ ಬಳಕೆ ಬೆದರಿಕೆಗೆ ಭಾರತ ಎಂದಿಗೂ ಜಗ್ಗುವುದಿಲ್ಲ ಎಂದು ಮತ್ತೊಮ್ಮೆ ಮೋದಿ ಪಾಕಿಸ್ತಾನ ವಿರುದ್ಧ ಗುಡುಗಿದರು.
ನಿಮ್ಮ ಶಕ್ತಿಯಿಂದ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆ ಮೂರು ಸೇನಾಪಡೆಗೆ ನಾನು ಸಲ್ಯೂಟ್ ಮಾಡುತ್ತೇನೆ ನಿಮ್ಮ ದರ್ಶನ ಪಡೆಯುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ನಾವು ಹೊಸ ಇತಿಹಾಸವನ್ನು ರಚಿಸಿದ್ದೇವೆ. ಭಾರತ್ ಮಾತಾ ಕಿ ಜೈ ಎಂದರೆ ಉಗ್ರರಿಗೆ ನಡುಕ ಶುರುವಾಗಿದೆ. ದೇಶದ ಮುಂದಿನ ಪೀಳಿಗೆಗೂ ನೀವು ಪ್ರೇರಣೆಯಾಗಿದ್ದೀರಿ ಎಂದು ಪಂಜಾಬ್ ನ ಆದಮಪುರದಲ್ಲಿ ಸೈನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.