ಬೆಂಗಳೂರು : ರಾ ಆಫೀಸ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 90 ಲಕ್ಷಕ್ಕೂ ಅಧಿಕ ವಂಚನೆ ಎಸಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹಣ ಪಡೆದು ನಕಲಿ ನೇಮಕಾತಿ ಮಾಡುತ್ತಿದ್ದ ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ವೇಣುಗೋಪಾಲ್ ಹಾಗೂ ಅರವಿಂದ್ ಆರೋಪಿಗಳು ಎಂದು ತಿಳಿದು ಬಂದಿದೆ. ಆರೋಪಿಗಳು ಯಲಹಂಕದ ಸುಪ್ರೀಂ ಲೇಔಟ್ ನಲ್ಲಿ ಕಚೇರಿ ಕೂಡ ತೆರೆದಿದ್ದರು. ಅಲ್ಲದೇ ರಾ ಆಫೀಸ್ ಎಂದು ವೇಣುಗೋಪಾಲ ಹಾಗೂ ಅರವಿಂದ್ ಕಚೇರಿಯನ್ನು ಮಾಡಿಕೊಟ್ಟಿದ್ದರು. ಐಡಿ ಕಾರ್ಡ್ ಪ್ರಿಂಟರ್, ಕಲರ್ ಪ್ರಿಂಟರ್ ಹಾಗೂ ನಕಲಿ ಎಸ್ ಆರ್ ಪತ್ತೆಯಾಗಿದ್ದು ಬಂಧಿತರ ಆರೋಪಿಗಳ ಬಳಿ 3 ನಕಲಿ ನೇಮಕಾತಿ ಪತ್ರ ಪತ್ತೆಯಾಗಿದೆ.
ಕೆಲಸ ಕೊಡಿಸೋದಾಗಿ ಇದುವರೆಗೂ 40ಕ್ಕೂ ಹೆಚ್ಚು ಜನರಿಗೆ ವಂಚನೆ ಎಸಗಿರುವುದು ಬೆಳಗೆಗೆ ಬಂದಿದೆ. ಸರಕಾರಿ ಕೆಲಸ ಹುಡುಕುವವರನ್ನು ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು. ಆರೋಪಿಗಳು 90 ಲಕ್ಷಕ್ಕೂ ಹೆಚ್ಚು ಹಣ ಪಡೆದಿರುವುದು ಬೆಳಕಿಗೆ ಬಂದಿದೆ.