ಬೆಂಗಳೂರು : ಇತ್ತೀಚಿಗೆ ಈ ಆನ್ಲೈನ್ ಗೇಮ್ ಗಳಿಂದ ಯುವಕರು ತಮ್ಮ ಮುಂದಿನ ಜೀವನವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಆನ್ಲೈನ್ ಗೇಮ್ ಆಡೋದಕ್ಕೆ ಸಾಲ ಮಾಡಿಕೊಂಡಿದ್ದ ಪ್ರವೀಣ್ ಎನ್ನುವ ಯುವಕನೊಬ್ಬ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೌದು ಆನ್ಲೈನ್ ಗೇಮ್ ಹುಚ್ಚಿಗೆ ಪ್ರವೀಣ್ ಕಾಲೇಜಿಗೂ ಹೋಗುತ್ತಿರಲಿಲ್ಲ. ಆನ್ಲೈನ್ ಗೇಮ್ ಆಡಲು ಪ್ರವೀಣ್ ಸಾಲ ಕೂಡ ಮಾಡಿಕೊಂಡಿದ್ದ. ಇತ್ತೀಚಿಗೆ ಪ್ರವೀಣ್ ಗೆ ಸಾಲಗಾರರ ಕಾಟ ಕೂಡ ಜಾಸ್ತಿ ಆಗಿತ್ತು. ಸಾಲ ನೀಡಿದವರು ಬ್ಲಾಕ್ ಮೇಲ್ ಮಾಡಿದ ಆರೋಪ ಕೂಡ ಕೇಳಿಬಂದಿದೆ.ಆನ್ಲೈನ್ ಗೇಮ್ ನಿಂದ ಗೆದ್ದ ಹಣವನ್ನು ತೆಗೆದುಕೊಳ್ಳುತ್ತಿದ್ದರಂತೆ. ಇದೇ ಕಾರಣಕ್ಕೆ ಬೇಸತ್ತು ಯುವಕ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಮೂರು ದಿನದ ಹಿಂದೆ ಕೆ.ಆರ್.ಪುರಂ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿತ್ತು.