ಬೆಂಗಳೂರು : ಮನೆ ಬಾಡಿಗೆ ಕೇಳುವ ನೆಪದಲ್ಲಿ ಸರ ಎಗರಿಸುತ್ತಿದ್ದ ದಂಪತಿ ಅರೆಸ್ಟ್ ಆಗಿದ್ದಾರೆ. ಪತಿ ಜೀವನ್ ಅಲಿಯಾಸ್ ಜೀವ (30)ಪತ್ನಿ ಆಶಾ (30) ಇಬ್ಬರ ಬಂಧನವಾಗಿದೆ. ಬಂಧಿತ ದಂಪತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದವರು ಎಂದು ತಿಳಿದುಬಂದಿದೆ.
17 ಲಕ್ಷ ಮೌಲ್ಯದ 240 ಗ್ರಾಮ್ ಚೆನ್ನಾಭರಣ 90 ಗ್ರಾಂ ಬೆಳ್ಳಿಯನ್ನು ಅವರಿಂದ ಜಪ್ತಿ ಮಾಡಿಕೊಳ್ಳಲಾಗಿದೆ. ದರೋಡೆ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಕೇಸ್ ಇವರ ಮೇಲೆ ದಾಖಲಾಗಿದ್ದವು. ಬಂಧಿತ ದಂಪತಿಯ ವಿರುದ್ಧ ಒಟ್ಟು 15 ಪ್ರಕರಣಗಳು ದಾಖಲಾಗಿದ್ದವು.
ದರೋಡೆ ಸ್ಟೋರಿ ಕೇಳಿ ಪೊಲೀಸರೆ ಶಾಕ್!
2024 ಫೆಬ್ರವರಿ 13 ರಂದು ಲಕ್ಷ್ಮಿಪುರದಲ್ಲಿ ವೃದ್ದೆ ಭಾಗ್ಯಮ್ಮ ಎನ್ನುವ ಕೊಲೆಯಾಗಿತ್ತು. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರದಲ್ಲಿ ಈ ಒಂದು ಕೊಲೆ ಆಗಿತ್ತು. ಕೊಲೆಯ ಬಳಿಕ ಸಂಪ್ನಲ್ಲಿ ಮೃತ ದೇಹ ಹಾಕಿ ಈ ಇಬ್ಬರು ದಂಪತಿಗಳು ಪರಾರಿಯಾಗಿದ್ದರು. ಕೇಂದ್ರವಲಯ ಐಜಿಪಿ ಲಾಬೂರಾಮ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ತಾವರೆಕೆರೆ ಇನ್ಸ್ಪೆಕ್ಟರ್ ಮೋಹನ್ ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದ್ದು, ಹೊಸಕೋಟೆಯ ಬಳಿ ಮತ್ತೊಂದು ಕೃತ್ಯ ಎಸಗುವ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿ ಜೀವನ್ ಬೇಕರಿಯಲ್ಲಿ ತಿಂಡಿ ತಯಾರಿಸುವ ಕೆಲಸವನ್ನು ಮಾಡುತ್ತಿದ್ದ ಇನ್ನು ಪತ್ನಿ ಆಶಾ ಒಂಟಿ ಮಹಿಳೆಯರು ವಾಸಿಸುವುದ ಸ್ಥಳವನ್ನು ಗುರುತಿಸುತ್ತಿದ್ದಳು.
ಬಳಿಕ ಇಬ್ಬರು ಸೇರಿಕೊಂಡು ಸ್ಥಳವನ್ನು ಗುರುತಿಸಿ ಪತ್ನಿ ಜೀವನ್ ಜೊತೆಗೆ ತೆರಳಿ ಆಶಾ ಕೃತ್ಯ ವ್ಯಸಗುತ್ತಿದ್ದಳು. ಜುವೆಲ್ಲರಿ ಅಂಗಡಿಗೆ ತೆರಳಿ ಕದ್ದ ಮಾಲನ್ನು ಮಾರಾಟ ಮಾಡುವ ಮುನ್ನ ಕಷ್ಟ ಇದೆ ಅಂತ ದಂಪತಿಗಳು ಹೇಳುತ್ತಿದ್ದರು. ಚಿನ್ನಾಭರಣ ಮಾರಾಟ ಮಾಡಿ ಬರುತ್ತಿದ್ದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.