ಬೆಂಗಳೂರು : ಬೆಸ್ಕಾಂ ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ ಅವ್ಯವಹಾರ ಆರೋಪ ಕುರಿತಂತೆ ಬಿಜೆಪಿ ಶಾಸಕರಾದಂತಹ ಎಸ್ ಆರ್ ವಿಶ್ವನಾಥ್ ಅವರು ಲೋಕಾಯುಕ್ತ ಎಸ್ ಪಿ ಅವರಿಗೆ ಇಂದು ಸಲ್ಲಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅನರ್ಹರಿಗೆ ಟೆಂಡರ್ ಕೊಡುತ್ತಿದೆ. ಹೀಗಾಗಿ ಇವತ್ತು ಲೋಕಾಯುಕ್ತ ಎಸ್ಪಿಗೆ ದೂರು ಕೊಟ್ಟಿದ್ದೇನೆ. ರಾಜ್ಯಪಾಲರಿಗೆ ಅನುಮತಿ ಕೇಳುತ್ತೇವೆ ಅಂತ ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿಕೆ ನೀಡಿದರು.
ಈ ಹಿಂದೆ ಅಶ್ವಥ್ ನಾರಾಯಣ ಅವರು ಕೂಡ ಬೆಸ್ಕಾಂ ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಇದೇ ವಿಚಾರವಾಗಿ ಇಂದು ಲೋಕಾಯುಕ್ತ ಎಸ್ ಪಿಗೆ ದೂರು ಸಲ್ಲಿಸಿದ್ದಾರೆ.