ದಾವಣಗೆರೆ : ಟಿಸಿ ದುರಸ್ತಿ ಮಾಡಲು ರೈತನಿಂದ 10 ಸಾವಿರ ಲಂಚ ಪಡೆಯುವ ವೇಳೆ ಬೆಸ್ಕಾಂ AE ಅಧಿಕಾರಿಯೊಬ್ಬ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಸಂತೆಬೆನ್ನೂರಲ್ಲಿ ನಡೆದಿದೆ.
ಹೌದು ಲಂಚ ಪಡೆಯುವವಾಗಲೆ ಬೆಸ್ಕಾಂ ಸಹಾಯಕ ಇಂಜಿನಿಯರ್ ಮೋಹನ್ ಕುಮಾರ್ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಸಂತೆಬೆನ್ನೂರು ವಿಭಾಗದ ಬೆಸ್ಕಾಂ ಎ.ಇ ಮೋಹನ್ ಕುಮಾರ್, ಕೆಟ್ಟು ಹೋದ ಟಿಸಿಯನ್ನು ದುರಸ್ತಿ ಮಾಡಿಕೊಡಲು ಮೋಹನ್ ಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಮಲ್ಲಾಪುರ ರೈತ ಬಿ ಎಂ ಮಂಜುನಾಥ ಎಂಬುವವರಿಂದ ಬೆಸ್ಕಾಂ ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 10 ಸಾವಿರ ಲಂಚ ಸ್ವೀಕರಿಸುವಾಗ ಮೋಹನ್ ಕುಮಾರ್ ನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.