ಬೆಂಗಳೂರು : ಖಾಸಗಿ ಕ್ಲಿನಿಕಲ್ ಟ್ರಯಲ್‌ಗೆ ಸ್ವಪ್ರೇರಿತರಾಗಿ ಸೇರಿಕೊಂಡು ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘೋರ ಘಟನೆ ಬೆಂಗಳೂರಲ್ಲಿ ನಡೆದಿದೆ.ಮೃತ ಯುವಕನನ್ನು ಕಲಬುರ್ಗಿ ಮೂಲದ ನಾಗೇಶ್ ಎಂದು ತಿಳಿದುಬಂದಿದೆ.
ಹೌದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಔಷಧ ಪ್ರಯೋಗ ಕಂಪನಿಯಲ್ಲಿ ಡಿಸೆಂಬರ್ 2ನೇ ವಾರದಲ್ಲಿ ನಾಗೇಶ್ ಮೆಡಿಸಿನ್ ಟ್ರಯಲ್‌ಗೆ ಒಳಗಾದರು.ಆದರೆ, ಎರಡೇ ದಿನಗಳಲ್ಲಿ ಹೊಟ್ಟೆನೋವು ಬಂದಿತ್ತು, ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. 10 ದಿನಗಳ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಆದರೂ, ಜನವರಿ 21ರಂದು ಸಹೋದರನ ಮನೆಯಲ್ಲಿ ಸಾವನಪ್ಪಿದ್ದಾನೆ.ಈ ಕುರಿತು ನಾಗೇಶ್ ಸಹೋದರ ಜಾಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಗೇಶ್‌ನಸಹೋದರನದೂರಿನಪ್ರಕಾರ, ಟ್ರಯಲ್‌ಗೆ ಮುನ್ನ ಸಾವಿನ ಸಾಧ್ಯತೆಯನ್ನು ಹೊರತುಪಡಿಸಿ ಉಳಿದ ದುಷ್ಪರಿಣಾಮಗಳ ಬಗ್ಗೆ ಮಾತ್ರ ಕಂಪನಿ ಮಾಹಿತಿ ನೀಡಿತ್ತು. ಆದರೆ, ರಕ್ತಹೆಪ್ಪುಗಟ್ಟುವಿಕೆಯಿಂದ ನಾಗೇಶ್‌ನ ಮರಣವಾಗಿದ್ದು, ಇದಕ್ಕೆ ಔಷಧಿ ಪ್ರಯೋಗವೇ ಕಾರಣ ಎಂದು ಕುಟುಂಬವು ಆರೋಪಿಸಿದೆ. ಸದ್ಯ ಘಟನೆ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.