ಬೆಂಗಳೂರು : ಕುಡಿಯೋಕೆ ಹಣ ಕೊಡದಿದ್ದಕ್ಕೆ ಮಹಿಳೆಗೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ಬಿಳಿಶಿವಾಲೆ ಸರ್ಕಲ್ ಬಳಿ ಈ ಒಂದು ಘಟನೆ ನಡೆದಿದೆ. ನಾಗಲಕ್ಷ್ಮಿ ಎನ್ನುವ ಮಹಿಳೆಯ ಮೇಲೆ ಆನಂದ್ ಎನ್ನುವ ವ್ಯಕ್ತಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಎಡಭಾಗದ ಕಿವಿಯಿಂದ ಗದ್ದಲವರೆಗೆ ಚಾಕುವಿನಿಂದ ಪಾಪಿ ಆನಂದ್ ಇರಿದಿದ್ದಾನೆ. ಫೆಬ್ರವರಿ 24ರ ಸಂಜೆ ಈ ಒಂದು ಘಟನೆ ನಡೆದಿದ್ದು, ಕುಡಿತದ ಚಟಕ್ಕೆ ಬಿದ್ದಿದ್ದ ಆನಂದ್ ಕಂಡ ಕಂಡವರ ಬಳಿ ಹಣ ಕೇಳುತ್ತಿದ್ದ ಎನ್ನಲಾಗಿದೆ. ಹಾಗಾಗಿ ನಾಗಲಕ್ಷ್ಮಿ ಬಳಿಯು ಆನಂದ್ ಹಣ ಕೇಳಿದ್ದಾನೆ ಎಂದು ತಿಳಿದುಬಂದಿದೆ.ಹಣ ಕೊಡಲು ನಿರಾಕರಿಸಿದ್ದಕ್ಕೆ ನಾಗಲಕ್ಷ್ಮಿಗೆ ಚಾಕುವಿನಿಂದ ಇರಿದಿದ್ದಾನೆ ಇದೀಗ ಕೊತ್ತನೂರು ಪೊಲೀಸರು ಆನಂದ್ ನನ್ನು ಅರೆಸ್ಟ್ ಮಾಡಿದ್ದಾರೆ.