ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಮಹಿಳೆಯರಿಗೆ ಸೂಕ್ತವಾದ ರಕ್ಷಣೆಯೇ ಇಲ್ಲದಂತಾಗಿದೆ. ಮಹಿಳೆಯರ ಮೇಲೆ ಕಿರುಕುಳ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ.ಇದೀಗ ಬೆಂಗಳೂರಿನಲ್ಲಿ ತಡರಾತ್ರಿ ಮಹಿಳೆಯೋರ್ವಳನ್ನು 6 ಜನ ದುಷ್ಕರ್ಮಿಗಳು ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಬೆಂಗಳೂರಿನ ಪೀಣ್ಯದ ಸುವರ್ಣ ನಗರ ಬಸ್ ನಿಲ್ದಾಣದ ಬಳಿ ನಡೆದಿದೆ. ಕಳೆದ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ 6 ಜನರಿಂದ ಮಹಿಳೆಯ ಕಿಡ್ನ್ಯಾಪ್ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಕಿಡ್ನ್ಯಾಪ್ ಮಾಡಿರುವುದನ್ನು ನೋಡಿದ್ದೇನೆ ಎಂದು ಯುವಕನಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸತ್ಯಜೀತ್ ಚೌದರಿ ಎಂಬ ಯುವಕನು ಹಳದಿ ಬಣ್ಣದ ನಂಬರ್ ಪ್ಲೇಟ್ ಇಲ್ಲದ ಟಿಂಟೆಡ್ ಗ್ಲಾಸ್ ಕಾರ್ನಲ್ಲಿ ಬಂದು ದುಷ್ಕೃತ್ಯ ಎಸಗಲಾಗಿದೆ. ಕಪ್ಪು ಬಣ್ಣದ ಜಾಕೆಟ್ ಧರಿಸಿ, ಮಹಿಳೆಯ ಮುಖಕ್ಕೆ ಹಿಂಭಾಗದಿಂದ ವ್ಯಕ್ತಿ ಓರ್ವ ಬಟ್ಟೆಯಿಂದ ಅದುಮಿದ. ಮಹಿಳೆಯನ್ನು 6 ಜನ ವ್ಯಕ್ತಿಗಳು ಎತ್ತಿಕೊಂಡು ಕಾರ್ನ ಎಡಭಾಗದ ಡೋರ್ ತೆಗೆದು ಒಳಗೆ ಹಾಕಿಕೊಂಡು ಪರಾರಿ ಆಗಿದ್ದಾರೆ ಎಂದು ಯುವಕ ತಿಳಿಸಿದ್ದಾನೆ.
ಅಂದು ರಾತ್ರಿ ತನ್ನ ತಾಯಿಯ ಜೊತೆ ವಾಸವಾಗಿದ್ದ ಪಿಜಿಯಲ್ಲಿ ಫೋನ್ನಲ್ಲಿ ಮಾತನಾಡುವಾಗ ಘಟನೆ ನಡೆದಿದೆ. 32 ವರ್ಷ ವಯಸ್ಸಿನ ಮಹಿಳೆ ಫೋನ್ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಕಿಡ್ನ್ಯಾಪ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯಾ ಪೊಲೀಸರು ಆರು ದಿನದಿಂದ ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.