ಬೆಂಗಳೂರು : ಬೆಂಗಳೂರಲ್ಲಿ ಗೌರ ದುರಂತ ಒಂದು ಸಂಭವಿಸಿದ್ದು ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ವಿಡಿಯೋ ಮಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಹಳ್ಳಿಯಲ್ಲಿ ನಡೆದಿದೆ.
ಹೌದು ಪತಿಯ ಕಿರುಕುಳಕ್ಕೆ ಬೇಸತ್ತು ಮಾನಸ (25) ಸಾವನ್ನಪ್ಪಿದ್ದರೆ. ತಾನುಪತಿಯ ಕಿರುಕುಳದಿಂದ ಬೀಸುತ್ತಿದ್ದೇನೆ ಎಂದು ಆತ್ಮಹತ್ಯೆಗೆ ಮುನ್ನ ಅವರು ವಿಡಿಯೋ ಮಾಡಿದ್ದಾರೆ.6 ವರ್ಷದ ಹಿಂದೆ ದಿಲೀಪ್ ಜೊತೆಗೆ ಮಾನಸ ವಿವಾಹವಾಗಿತ್ತು. ದಂಪತಿಗೆ 5 ವರ್ಷದ ಒಂದು ಹೆಣ್ಣು ಮಗುವಿದೆ.ಕಳೆದ ಒಂದೂವರೆ ವರ್ಷದಿಂದ ಆತ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ.
ಇದೇ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಪತಿ ದಿಲೀಪ್ ಆಗಗ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಮಾನಸ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.