ಬೆಂಗಳೂರು : ಬೆಂಗಳೂರಿನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಬೀದಿ ನಾಯಿಗಳಿಗೆ ಊಟ ಹಾಕಿದಕ್ಕೆ ಮಹಿಳೆ ಒಬ್ಬರಿಗೆ ನಿಂದಿಸಿ ಅವರ ಮೇಲೆ ಐವರು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕೇಸ್ ದಾಖಲಾಗಿದೆ.
ಹೌದು ಬೆಂಗಳೂರಿನ ಎಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕೆಎಸ್ ದಾಖಲಾಗಿದೆ. ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗುರುರಾಜ್ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ಗುರುರಾಜ್ ಲೇಔಟ್ ನ 6ನೇ ಕ್ರಾಸ್ ನಲ್ಲಿ ಬೀದಿನಾಯಿಗಳಿಗೆ ಮಹಿಳೆಯೊಬ್ಬರು ಊಟ ಹಾಕುತ್ತಿದ್ದರು ಪ್ರತಿದಿನ ನಾಲ್ಕು ಬೀದಿನಾಯಿಗಳಿಗೆ ಮಹಿಳೆ ಅನ್ನಿ ಜಾರ್ಜ್ ಎನ್ನುವವರು ಊಟ ಹಾಕುತ್ತಿದ್ದರು.
ಕಳೆದ 10 ವರ್ಷದಿಂದ ಮಹಿಳೆ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ನವೆಂಬರ್ ಐದರಂದು ರಾತ್ರಿ ಊಟ ಹಾಕುತ್ತಿದ್ದಾಗ ಅಪರಿಚಿತ ವ್ಯಕ್ತಿಯಿಂದ ಕಿರಿಕ್ ಆಗಿದೆ. ಬೈಕ್ ಕೀ ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಮಹಿಳೆಯ ಮೊಬೈಲ್ ಎಸೆದು ಪ್ಲಾಸ್ಟಿಕ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆ ಸಂಭಂದ ಐವರ ವಿರುದ್ಧ ಎಚ್ಎಎಲ್ ಠಾಣೆಯಲ್ಲಿ FIR ದಾಖಲಾಗಿ