ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಿನ ಜನತೆ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಬಿಎಂಪಿ ಜನರಿಗೆ ನೀರು ಪೂರೈಕೆಗಾಗಿ ಸೂಕ್ತ ಕ್ರಮ ಕೈಗೊಂಡಿದ್ದು, ಇದೀಗ ಬೆಂಗಳೂರಿನಲ್ಲಿ ಬೋರ್ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಎಂದು ಜಲಮಂಡಳಿ ಆದೇಶ ಹೊರಡಿಸಿದೆ.
ಹೌದು ಇದೀಗ ಬೆಂಗಳೂರಲ್ಲಿ ಬೋರ್ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಎಂದು ಜಲ ಮಂಡಳಿ ತಿಳಿಸಿದೆ. ಅನುಮತಿ ಇಲ್ಲದೆ ಬೋರ್ವೆಲ್ ಕೊರೆದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೋರ್ವೆಲ್ ಕೊರೆಯುವ ಕುರಿತು ಜಲ ಮಂಡಳಿ ಆದೇಶ ಹೊರಡಿಸಿದೆ.ಅನುಮತಿ ಪಡೆದ ಸ್ಥಳದಲ್ಲಿ ಮಾತ್ರ ಬೋರ್ ಹಾಕಬೇಕು.ಒಂದು ವೇಳೆ ಅನುಮತಿ ಪಡೆದ ಸ್ಥಳ ಬಿಟ್ಟು ಬೇರೆ ಸ್ಥಳದಲ್ಲಿ ಬೋರ್ವೆಲ್ ಹಾಕಿದರೆ ಸೂಕ್ತವಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಳಮಂಡಳಿ, ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಬೇಕಾಬಿಟ್ಟಿ ಬೋರ್ವೆಲ್ ಕೊರೆಯುವವರಿಗೆ ಜಲ ಮಂಡಳಿ ಇದೀಗ ಶಾಕ್ ನೀಡಿದೆ. ಈ ಕುರಿತಂತೆ ಜಲಮಂಡಳಿ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಕೆ ಬಳಿಕ ಅನುಮತಿ ಸಿಕ್ಕರಷ್ಟೇ ಬೋರ್ವೆಲ್ ಕೊರೆಸಬಹುದಾಗಿದೆ ಎಂದು ಹೇಳಲಾಗುತ್ತಿದೆ.ಒಂದು ವೇಳೆ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವ ಕುರಿತಂತೆ ಎಚ್ಚರಿಕೆ ಸಹ ನೀಡಿದೆ.ಮಾರ್ಚ್ 15 ರಿಂದ ನಿಯಮ ಜಾರಿ ಮಾಡಿ ಆದೇಶ ಹೊರಡಿಸಿದೆ. ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಜಲ ಮಂಡಳಿ ಇದೀಗ ಹೊಸ ಕ್ರಮ ಕೈಗೊಂಡಿದೆ.