ಬೆಂಗಳೂರು : ಆಸ್ತಿ ವಿಚಾರಕ್ಕೆ ಸ್ವಂತ ಅಣ್ಣನ ಮಗನನ್ನೇ ಹತ್ಯೆಗೈದ ಚಿಕ್ಕಪ್ಪ ಕಾರಿನಿಂದ ಅಣ್ಣನ ಮಗನಿಗೆ ಅಪಘಾತ ಮಾಡಿ ಆತನ ಕೊಲೆಯಾದ ಬಳಿಕ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಕನಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಹೌದು ನೆಲಮಂಗಲ ತಾಲೂಕಿನ ಮಾಾಕನಕುಪ್ಪೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮಾಕನಕುಪ್ಪೆಯಲ್ಲಿ ರವಿಕುಮಾರ್ ಎಂಬಾತನ ಹತ್ಯೆ ನಡೆದಿದೆ. ಮೃತ ರವಿ ತಂದೆ ಚಿಕ್ಕಣ್ಣಗು ಹಾಗೂ ತಮ್ಮ ಸುರೇಶ್ ಗಲಾಟೆ ಇತ್ತು. ಸುಮಾರು 19 ಗುಂಟೆ ಜಮೀನಿಗಾಗಿ ಸಹೋದರರ ನಡುವೆ ಗಲಾಟೆ ನಡೆದಿದೆ.
ಮಗನನ್ನು ಕೊಂದರೆ ಎಲ್ಲಾ ಸರಿ ಹೋಗುತ್ತೆ ಎಂದು ಸುರೇಶ್ ಈ ಒಂದು ಕೃತ್ಯ ಎಸಗಿದ್ದಾನೆ. ಅಸ್ತಿಯ ವಿಚಾರವಾಗಿ ಅಣ್ಣನ ಮಗನನ್ನೇ ರಾಕ್ಷಸ ಚಿಕ್ಕಪ್ಪ ತನ್ನ ಕಾರಿನಿಂದ ಅಪಘಾತ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯ ಬಳಿಕ ಚಿಕ್ಕಪ್ಪ ಸುರೇಶ್ ಪರಾರಿಯಾಗಿದ್ದು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಯ ಬಳಿಕ ಪರಾರಿಯಾಗಿರುವ ಸುರೇಶ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.