ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಲು ಸಾಲು ಅಪಘಾತವಾಗುತ್ತಿದ್ದು, ವಾಹನ ಚಾಲಕರ ಹಾಗೂ ಬೈಕ್ ಸವಾರರ ನಿರ್ಲಕ್ಷತನದಿಂದಲೇ ಈ ಒಂದು ಅಪಘಾತಗಳು ಸಂಭವಿಸುತ್ತಿವೆ. ಇದೀಗ ಬೆಂಗಳೂರು ಜಿಲ್ಲೆಯ ಯಲಹಂಕ ತಾಲೂಕಿನ ಹೊನ್ನೇನಹಳ್ಳಿ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ.
ಅಪಘಾತದಲ್ಲಿ ಮೃತ ಯುವಕರನ್ನು ಪ್ರೆಸಿಡೆನ್ಸಿ ವಿವಿ ಬಿಬಿಎ ವಿದ್ಯಾರ್ಥಿ ತೇಜಸ್ (20), ಪವನ್ (21) ಎಂದು ತಿಳಿದುಬಂದಿದೆ. ಎರಡು ಬೈಕ್ ಗಳ ಡಿಕ್ಕಿಯ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ವಿಶ್ವನಾಥಪುರ ಗ್ರಾಮದ ಪವನ್ ಮತ್ತು ಹಿಂದೂಪುರ ಮೂಲದ ತೇಜಸ್ ಮೃತಪಟ್ಟಿದ್ದಾರೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.