ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಒಂದು ನಡೆದಿದ್ದು, ಸಿಹಿ ತಯಾರಿಕಾ ಕಂಪನಿಯೊಂದರಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.ಘಟನೆಯು ಗುರುವಾರ ನಡೆದಿದ್ದು ತಡವಾಗಿ ಬಳಕೆಗೆ ಬಂದಿದೆ.
ಮೃತ ಕಾರ್ಮಿಕರನ್ನು ನವೀನ್ ಹಾಗೂ ಆತನ ಸಂಬಂಧಿ ಲಿಂಗರಾಜು ಎಂದು ತಿಳಿದುಬಂದಿದೆ.ಸಿಹಿ ತಯಾರಿಕಾ ಕಂಪನಿಯು ಇತ್ತೀಚೆಗೆ ದಾಬಸ್ಪೇಟೆಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ಹೊಸ ಎಸ್ಟಿಪಿ ನಿರ್ಮಿಸಿ ಅದರ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡಿತ್ತು. ನವೀನ್ ಮತ್ತು ಲಿಂಗರಾಜು ಈ ಖಾಸಗಿ ಸಂಸ್ಥೆಯ ನೌಕರರಾಗಿದ್ದರು ಎನ್ನಲಾಗಿದೆ..
ಸಂಜೆ 6.15ರ ಸುಮಾರಿಗೆ ಟ್ಯಾಂಕ್ ಬಾಗಿಲು ತೆರೆದಿದ್ದು, ಈ ವೇಳೆ ನವೀನ್ ಆಕಸ್ಮಿಕವಾಗಿ ಬಿದ್ದಿದ್ದಾನೆ. ಎಸ್ಟಿಪಿ ಘಟಕ 12 ಅಡಿ ಇದ್ದು, ಈ ವೇಳೆ ನವೀನ್ನನ್ನು ಹೊರತೆಗೆಯಲು ಯತ್ನಿಸಿದ ಲಿಂಗರಾಜು ಕೂಡ ಅದರಲ್ಲಿ ಬಿದ್ದಿದ್ದಾನೆ. ಈ ವೇಳೆ ಇಬ್ಬರು ಉಸಿರುಪಟ್ಟಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಂಪನಿಯ ಮಾಲೀಕ ಹಾಗೂ ಇನ್ನೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದು ಇನ್ನೂ ಕೂಡ ಯಾರನ್ನು ಬಂಧಿಸಿಲ್ಲ. ನವೀನ್ ಹಾಗೂ ಲಿಂಗರಾಜು ಇಬ್ಬರೂ 26 ವರ್ಷ ವಯಸ್ಸಿನವರಾಗಿದ್ಗುಸ ತುಮಕೂರು ಜಿಲ್ಲೆಯ ಪಾವಗಡ ಬಳಿಯ ಮಧುಗಿರಿ ಮತ್ತು ಮಡಕಶಿರದ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.