ಬೆಂಗಳೂರು : ಹೋಳಿ ಹಬ್ಬದ ಅಂಗವಾಗಿ ಎಲ್ಲೆಡೆ ರಂಗುರಂಗಿನ ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಬೆಂಗಳೂರಿನ ಸರ್ಜಾಪುರದಲ್ಲಿ ಹೋಳಿ ಹಬ್ಬದ ದಿನದಂದೆ ಘೋರವಾದ ದುರಂತ ಸಂಭವಿಸಿದೆ. ಹೋಳಿ ಹಬ್ಬ ದಿನದಂದೇ ಮಾರಾಮಾರಿ ನಡೆದು ಗಲಾಟೆಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.
ಹೌದು ಹೋಳಿ ಹಬ್ಬದ ವೇಳೆ ಮಾರಾಮಾರಿ ನಡೆದು ಈ ಒಂದು ಗಲಾಟೆಯಲ್ಲಿ ಮೂವರು ಸಾವನ್ನಾಪ್ಪಿದ್ದರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಈ ಒಂದು ದುರ್ಘಟನೆ ನಡೆದಿದೆ. ಮೃತ ಮೂವರನ್ನು ಬಿಹಾರ್ ಮೂಲದವರು ಎಂದು ತಿಳಿದುಬಂದಿದೆ.ಕುಡಿದ ನಶೆಯಲ್ಲಿ ಕಾರ್ಮಿಕರ ನಡುವೆ ಮಾರಮಾರಿ ನಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ, ಘಟನಾ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.