ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿಬಿಳಿಸುವಂತಹ ಘಟನೆ ಒಂದು ನಡೆದಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಮೂವರು ಹೆಣ್ಣು ಮಕ್ಕಳು ದಿಢೀರ್ ನಾಪತ್ತೆಯಾಗಿದ್ದಾರೆ. ಈ ಒಂದು ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮರಿಯಪ್ಪನಪಾಳ್ಯದಲ್ಲಿ ಸಂಜೆ 4 ಗಂಟೆಗೆ ನಡೆದಿದೆ.
ಕಾಣೆಯಾದ ಮಕ್ಕಳನ್ನು ಹರ್ಷಿತ (3) ನಿಶ್ವಿಕ (6) ಹಾಗೂ ರಶ್ಮಿತಾ (10) ಎಂದು ನಾಪತ್ತೆಯಾದ ಮಕ್ಕಳು ಎಂದು ತಿಳಿದು ಬಂದಿದೆ. ಮನೆಯಿಂದ ಹೊರಗೆ ಬಂದು ಮಕ್ಕಳು ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಾರೆ. ಮೂರು ಮಕ್ಕಳ ಪೋಷಕರು ಎಷ್ಟೇ ಹುಡುಕಾಡಿದರು ಕೂಡ ಸಿಗದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಮಕ್ಕಳ ಶೋಧ ಕಾರ್ಯ ಆರಂಭಿಸಿದ್ದಾರೆ.