ಬೆಂಗಳೂರು : ದಾರಿ ಬಿಡುವ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಕಿರಿಕ್ ಆಗಿದ್ದು, ವಿದ್ಯಾರ್ಥಿಯೋರ್ವನಿಗೆ ಕುತ್ತಿಗೆಗೆ ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೇಸಿಡೆನ್ಸಿ ವಿಶ್ವವಿದ್ಯಾಲಯದ ಬಳಿ ಈ ಒಂದು ಘಟನೆ ನಡೆದಿದೆ.
ದಾರಿ ಬಿಡದಿದ್ದಕ್ಕೆ ಗುರಾಯಿಸಿದ ಅಂತ ಹೇಳಿ ಲಿಖಿತ್ ಗೌಡ ಎಂಬ ವಿದ್ಯಾರ್ಥಿಯ ಮೇಲೆ ಜಯಂತ್ ಮತ್ತು ಮಾದೇಶ ಎನ್ನುವ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ವಿಶ್ವವಿದ್ಯಾಲಯ ಹೊರಗಿನ ಬೈಕ್ ಪಾರ್ಕಿಂಗ್ ಬಳಿ ಜಯಂತ ತಂಡ ದಾಳಿ ಮಾಡಿದೆ ಎನ್ನಲಾಗಿದೆ.
ಚಾಕುವಿನಿಂದ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಲಿಖಿತ್ ಕುತ್ತಿಗೆಗೆ ಗಂಭೀರವಾದ ಗಾಯಗಳಾಗಿವೆ. ಜಗಳ ಬಿಡಿಸಿ ಗಾಯಾಳುಗಳನ್ನು ತಕ್ಷಣ ಸಹಪಾಠಿಗಳು ಆಸ್ಪತ್ರೆಗೆ ಸೇರಿಸಿದ್ದಾರೆ. ರಾಜನಕುಂಟೆ ಠಾಣೆಯಲ್ಲಿ ಗಾಯಾಳು ಲಿಖಿತ್ ಗೌಡ ದೂರು ದಾಖಲಿಸಿದ್ದಾನೆ ಎಂದು ಹೇಳಲಾಗುತ್ತಿದೆ.