ಬೆಂಗಳೂರು : ಮನೆ ಬಾಡಿಗೆಗೆ ಇದ್ದಂತಹ ವ್ಯಕ್ತಿ ಒಬ್ಬ ವೃದ್ಧ ದಂಪತಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಮನೆಯನ್ನೇ ದೋಚಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಬೆಂಗಳೂರಲ್ಲಿ ರಾಬರಿ ಮಾಡಿದ ಮೂವರು ಆರೋಪಿಗಳ ಬಂಧನವಾಗಿದೆ. ಕಳೆದ ಸೆಪ್ಟೆಂಬರ್ 21 ರಂದು ರಾಮಮೂರ್ತಿ ನಗರದ ಕಸ್ತೂರಿ ನಗರದಲ್ಲಿ ಈ ಒಂದು ರಾಬರಿ ನಡೆದಿತ್ತು. ವೃದ್ಧ ದಂಪತಿಯ ಮೇಲೆ ಹಲ್ಲೆ ಮಾಡಿ ಆರೋಪಿಗಳು ರಾಬರಿ ಮಾಡಿದ್ದರು. ಈ ಒಂದು ಪ್ರಕರಣಕ್ಕೆ ಟ್ವಿಸ್ಟ್ ಏನೆಂದರೆ ಬಾಡಿಗೆದಾರೆ ರಾಬರಿ ಮಾಡಿದ್ದಾರೆ ಎಂಬುವುದು ತನಿಖೆಯ ವೇಳೆ ಬಯಲಾಗಿದೆ.
ಹೌದು ಶಿವಕುಮಾರ್ ಮಣಿಕಂಠ ಮತ್ತು ಪ್ರಶಾಂತ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ವೃದ್ದ ದಂಪತಿ ಮನೆಯಲ್ಲಿ ಬಾಡಿಗೆಗೆ ಇದ್ದ ಶಿವಕುಮಾರ್ ದಂಪತಿಗಳಿಗೆ ಸಹಾಯ ಕೂಡ ಮಾಡುತ್ತಿದ್ದ. ದಂಪತಿಗಳ ಮನೆ ರಾಬರಿಗೆ ಸ್ಕೆಚ್ ಹಾಕಿದ್ದ ಎನ್ನಲಾಗುತ್ತಿದೆ. ಇದಕ್ಕಾಗಿ ಮಣಿಕಂಠ ಮತ್ತು ಪ್ರಶಾಂತ ಜೊತೆ ರಾಬರಿಗೆ ಸ್ಕೆಚ್ ಹಾಕಿದ್ದ.
ಶಿವಕುಮಾರ್ ಸೆಪ್ಟೆಂಬರ್ 21ರ ಬೆಳಿಗ್ಗೆ 7.45 ರ ಸುಮಾರಿಗೆ ರಾಬರಿ ಮಾಡಿ ಪರಾರಿ ಯಾಗಿರುವ ಘಟನೆ ನಡೆದಿತ್ತು. ಡೆಲಿವರಿ ಬಾಯ್ ವಿಷಯದಲ್ಲಿ ಬಂದಂತಹ ಶಿವಕುಮಾರ್ ಮಣಿಕಂಠ ಮತ್ತು ಪ್ರಶಾಂತ್ ವೃದ್ಧ ದಂಪತಿಯ ಮೇಲೆ ಹಲ್ಲೆ ಮಾಡಿ ಮನೆ ದರೋಡೆ ಮಾಡಿ ಪರಾರಿಯಾಗಿದ್ದರು. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.