ಬೆಂಗಳೂರು : ಬೆಂಗಳೂರಿನಲ್ಲಿ ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದು, ಬ್ಲಾಕ್ ಅಂಡ್ ವೈಟ್ ದಂಧೆ ಹೆಸರಲ್ಲಿ ದರೋಡೆ ನಡೆಸಲಾಗುತ್ತಿದೆ. 1 ಕೋಟಿ ಕ್ಯಾಶ್ ಕೊಟ್ಟರೆ 1.20 ಕೋಟಿ ಕೊಡುವುದಾಗಿ ನಂಬಿಸಿ ಇದೀಗ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ವರದಿಯಾಗಿದೆ.
ಹೌದು ಬ್ಲ್ಯಾಕ್ & ವೈಟ್ ದಂಧೆ ಹೆಸರಲ್ಲಿ ದರೋಡೆ ಮಾಡುತ್ತಿದ್ದ ಮೂವರು ಆರೋಪಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಒಂದು ಆಸೆಯಿಂದ ಚನ್ನಪಟ್ಟಣದದಿಂದ ಜಯಚಂದ್ರ ಎನ್ನುವವರಿಗೆ ಆರೋಪಿ ಶ್ರೀನಿವಾಸ್ ನಂಬಿಸಿದ್ದ. ಜಯಚಂದ್ರ ರನ್ನು ಶ್ರೀನಿವಾಸ್ ಬೆಂಗಳೂರಿಗೆ ಕರೆಸಿಕೊಂಡಿದ್ದ. ಪರಿಚಯಸ್ಥ ಶ್ರೀನಿವಾಸ್ ಮಾತಿನಂತೆ ಜಯಚಂದ್ರ ಬೆಂಗಳೂರಿಗೆ ಬಂದಿದ್ದ.
ಬೆಂಗಳೂರಿನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಡಿಲೀಟ್ ಮಾತುಕತೆ ನಡೆದಿದೆ. ಶ್ರೀನಿವಾಸ್ ಗೆ ಒಂದು ಕೋಟಿ ಹಣ ಕೊಡಲು ಜಯಚಂದ್ರ ಬಂದಿದ್ದ ಈ ವೇಳೆ ಅಂಬರೀಶ್, ಮಾರ್ಟಿನ್, ರವಿ ಮತ್ತು ವೆಂಕಟೇಶ್ ಅಲ್ಲಿಯೇ ಇದ್ದರು ಎರಡು ದಿನಗಳಲ್ಲಿ ನಿಮ್ಮ ಅಕೌಂಟಿಗೆ ಹಣ ಬರುವುದಾಗಿ ಭರವಸೆ ಕೊಟ್ಟಿದ್ದಾರೆ. ಸಚಿನ್ ಎಂಬಾತನಿಂದ ಅಕೌಂಟ್ಗೆ ಹಣ ಕ್ರೆಡಿಟ್ ಆಗುತ್ತದೆ ಎಂದು ಹೇಳುತ್ತಾನೆ.
ಆರೋಪಿ ಶ್ರೀನಿವಾಸ್ ಮಾತಿನಿಂದ ಜಯಚಂದ್ರಗೆ ಅನುಮಾನ ಮೂಡಿದೆ. ಈಗಲೇ ಹಣ ಹಾಕಿದರೆ ಕೊಡುವುದಾಗಿ ಜಯಚಂದ್ರ ಹೇಳಿದ್ದಾನೆ ಅದೇ ವೇಳೆ ವಿದ್ಯಾರಣ್ಯಪುರದಲ್ಲಿ ಕರೆಂಟ್ ಕಟ್ ಆಗುತ್ತದೆ ತಕ್ಷಣ ಒಂದು ಕೋಟಿ ಹಣ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ ಇವೇ ಮಾರ್ಟಿನ್ ಅನ್ನು ಜಯಚಂದ್ರ ಸ್ಥಳದಲ್ಲಿ ಹಿಡಿದಿದ್ದಾರೆ ಕೂಡಲೇ ಹೊನ್ನೂರ ನಾಡಿಗೆ ಕರೆ ಮಾಡಿ ಜಯಚಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.