ಬೆಂಗಳೂರು : ಹಾಸ್ಟೆಲ್ ನಲ್ಲಿ ಇದ್ದಂತಹ ಬಾಲಕಿಯ ಮೇಲೆ ಕನ್ನಡ ಶಿಕ್ಷಕಿಯೊಬ್ಬರು ಗಲಾಟೆ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಕೋಪದಿಂದ ಕೋಲಿನಿಂದ ಹಲ್ಲೆ ಮಾಡಿದ ಪರಿಣಾಮ ಇದೀಗ ಬಾಲಕಿಯ ಬಲ ಭುಜದ ಮೂಳೆ ಮುರಿತದಿಂದ ನರಳಾಡುತ್ತಿರುವ ಘಟನೆ ಬೆಂಗಳೂರಿನ ರಾಜಾಜಿನಗರದ ಅಂಬೇಡ್ಕರ್ ಮೆಮೋರಿಯಲ್ ಸ್ಕೂಲ್ ನಲ್ಲಿ ಘಟನೆ ನಡೆದಿದೆ.
ಹೌದು ಬೆಂಗಳೂರಿನ ರಾಜಾಜಿನಗರದ ಅಂಬೇಡ್ಕರ್ ಮೆಮೋರಿಯಲ್ ಸ್ಕೂಲ್ ನಲ್ಲಿ ಕಳೆದ ಅಕ್ಟೊಬರ್ 28 ರಂದು ಈ ಒಂದು ಘಟನೆ ನಡೆದಿದೆ. ಅನ್ನಪೂರ್ಣ ಎನ್ನುವ ಮಗುವಿನ ಕೈ ಮುರಿದ ಕನ್ನಡ ಟೀಚರ್. ಸ್ಕೂಲ್ ನಲ್ಲಿ ಗಲಾಟೆ ಮಾಡುತ್ತಿದ್ದಳು ಎಂದು ಶಿಕ್ಷಕಿ ಹಲ್ಲೆ ಮಾಡಿದ್ದಾರೆ. ಹಾಸ್ಟೆಲ್ ನಲ್ಲಿರುವ ಮಗುವಿನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ.
ಕೋಲಿನಿಂದ ಬಾಲಕಿಯ ಮೇಲೆ ಟೀಚರ್ ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಬಾಲಕಿಯ ಭುಜದ ಮೂಳೆ ಮುರಿದುಹೋಗಿದೆ. ಎಕ್ಸರೆ ಮಾಡಿಸಿದಾಗ ಮೂಳೆ ಮುರಿತವಾಗಿದ್ದು, ಕಂಡುಬಂದಿದೆ. ಕನ್ನಡ ಟೀಚರ್ ಮಮತಾ ವಿರುದ್ಧ ಇದೀಗ ಪೋಷಕರು ಆರೋಪ ಮಾಡಿದ್ದಾರೆ.
ಅಕ್ಟೋಬರ್ 28 ರಂದು ಗಲಾಟೆ ಮಾಡುತ್ತಿದ್ದಳು ಎಂದು ಟೀಚರ್ ಮೇಲೆ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ, ಕೊಲ್ನಿಂದ ಜೋರಾಗಿ ಹೊಡೆದಿದ್ದಕ್ಕೆ ಬಾಲಕಿಯ ಬಲ ಭಾಗದ ಭುಜದ ಮೂಳೆ ಮುರೀತವಾಗಿದೆ. ಎರಡು ಮೂರು ದಿನ ನೋವಿನಲ್ಲೇ ಬಾಲಕಿ ಒದ್ದಾಡಿದ್ದಾಳೆ ಎನ್ನಲಾಗಿದೆ.