ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಕುಡಿದ ನಶೆಯಲ್ಲಿ ತಾಯೊಂದಿಗೆ ಜಗಳ ಮಾಡಿದ ಮಗ ತಾಯಿಯ ಕತ್ತು ಹಿಸುಕಿ ಕೊಂದ ಬಳಿಕ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸೂರ್ಯ ಸಿಟಿ ಬಳಿಯ ಹಳೆ ಚಂದಾಪುರದಲ್ಲಿ ನಡೆದಿದೆ.
ಕತ್ತು ಹಿಸುಕಿ ತಾಯಿಯನ್ನು ಕೊಂದು ಪುತ್ರನೊಬ್ಬ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಸೂರ್ಯ ಸಿಟಿ ಬಳಿಯ ಹಳೆ ಚಂದಾಪುರದಲ್ಲಿ ಈ ಒಂದು ಘಟನೆ ನಡೆದಿದೆ. ತಾಯಿ ಲಕ್ಷ್ಮಿ ದೇವಿ (41) ಕೊಂದು ಪುತ್ರ ರಮೇಶ್ (21) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕ ಹಳ್ಳಿಯ ನಿವಾಸಿಗಳು ಎಂದು ತಿಳಿದು ಬಂದಿದೆ.
ಕೆಲವು ವರ್ಷಗಳ ಹಿಂದೆ ಕೂಲಿ ಅರಸಿಕೊಂಡು ತಾಯಿ ಮತ್ತು ಪುತ್ರ ಬೆಂಗಳೂರಿಗೆ ಬಂದಿದ್ದರು. ಕೂಲಿ ಕೆಲಸ ಮಾಡಿಕೊಂಡು ತಾಯಿ ಮತ್ತು ಮಗ ಜೀವನ ಸಾಗಿಸುತ್ತಿದ್ದರು. ಆದರೆ ಮಗನಿಗೆ ಕುಡಿತದ ಚಟ ಇತ್ತು. ಆಗಾಗ ತಾಯಿಯ ಜೊತೆಗೆ ಕುಡಿದು ಬಂದು ನಶೆಯಲ್ಲಿ ಗಲಾಟೆ ಮಾಡುತ್ತಿದ್ದ. ನೆನ್ನೆ ರಾತ್ರಿಯು ಕೂಡ ಕುಡಿದು ಬಂದು ತಾಯಿ ಲಕ್ಷ್ಮಿ ಜೊತೆಗೆ ಗಲಾಟೆ ಮಾಡಿದ್ದಾನೆ.
ಈ ವೇಳೆ ಗಲಾಟೆ ವಿಕೊಪಕ್ಕೆ ತಿರುಗಿ ತಾಯಿಯ ಕತ್ತು ಹಿಸುಕಿ ರಮೇಶ್ ಕೊಂದಿದ್ದಾನೆ. ಬಳಿಕ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಸೂರ್ಯನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಸದ್ಯ ತಾಯಿ ಮತ್ತು ಮಗನ ಮೃತ ದೇಹವನ್ನು ಅತ್ತಿಬೆಲೆಯ ಆಕ್ಸ್ಫರ್ಡ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.