ಬೆಂಗಳೂರು : ಊಟ ಹಾಕಲ್ಲ ವೆಂದು ತಾಯಿಯು ಬೈದಿದ್ದಕ್ಕೆ 18 ವರ್ಷದ ಮಗನೊಬ್ಬ ಹೆತ್ತ ತಾಯಿಯನ್ನೇ ರಾಡ್ ನಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಆರ್ ಪುರಂನ ಭೀಮಯ್ಯ ಲೇಔಟ್ ನಲ್ಲಿ ಈ ದುರಂತ ಸಂಭವಿಸಿದೆ.
ತಾಯಿ ನೇತ್ರ (40) ಕೊಲೆಗೆ ಈಡಾಗಿರುವ ದುರ್ದೈವಿಯಾಗಿದ್ದಾರೆ. ನಂತರ ಕೊಲೆ ಮಾಡಿ ಠಾಣೆಗೆ ಶರಣಾದ ಮಗ, ಊಟ ಹಾಕಲ್ಲ ಅಂದಿದ್ದಕ್ಕೆ ತಾಯಿಯನ್ನು ರಾಡ್ ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.ಇಂದು ಬೆಳಿಗ್ಗೆ 7 ಗಂಟೆಗೆ ಮಗನು ಕಾಲೇಜಿಗೆ ಹೋಗಲು ತಯಾರಾದಾಗ, ತನ್ನ ತಾಯಿಗೆ ಊಟ ಬಡಿಸು ಎಂದು ಕೇಳಿಕೊಂಡಾಗ ತಾಯಿ ಕೋಪದಲ್ಲಿ ನೀನು ನನ್ನ ಮಗನೆ ಅಲ್ಲ ಊಟ ಹಾಕಲ್ಲವೆಂದು ಬೈದಿದ್ದಾಳೆ .
ಈ ವೇಳೆ ಕ್ರೋದಗೊಂಡ ಮಗ ಅಲ್ಲಿಯೇ ಇದ್ದ ರಾಡ್ ನಿಂದ ಬಲವಾಗಿ ತಾಯಿಗೆ ಹೊಡೆದಿದ್ದಾನೆ. ತಾಯಿ ಸಾವನಪ್ಪಿದಿರುವ ಕುರಿತು ಖಚಿತವಾದ ಮೇಲೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೆ ಆರ್ ಪುರಂ ಠಾಣೆ ಪೊಲೀಸ್ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.