ಬೆಂಗಳೂರು : ಅಕ್ಕ ತಂಗಿಯರಿಬ್ಬರೂ ಮೊಬೈಲ್ಗಾಗಿ ಜಗಳವಾಡುತ್ತಿದ್ದ ವೇಳೆ ಈ ವೇಳೆ ತಂಗಿಯ ಗಂಡ ಜಗಳ ಬಿಡಿಸಲು ಹೋಗಿದ್ದಾನೆ. ಅಕ್ಕ ತಂಗಿಯ ಗಂಡನಿಗೆ ನಿಂದಿಸಿದ್ದಾಳೆ ದೊಣ್ಣೆಯಿಂದ ಅತ್ತಿಗೆಯ ಮೇಲೆ ಹಲ್ಲೆ ಮಾಡಿದ್ದು, ಅತ್ತಿಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಹೊಸೂರು ಸಿಂಗಸಂದ್ರ ಬಳಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೊಸೂರು ಸಿಂಗಸಂದ್ರ ಬಳಿ ಭೀಕರವಾಗಿ ಕೊಲೆಯಾಗಿದ್ದು, ಬಿಹಾರ ಮೂಲದ ಗುಡಿಯಾ ಬೇಬಿ (42)ಎಂಬ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. ಗುಡಿಯಾದೇವಿಯನ್ನು ರಾಜೇಶ್ ಕುಮಾರ್ ಎಂಬ ವ್ಯಕ್ತಿ ಕೊಲೆ ಗೈದಿದ್ದಾನೆ ಎಂದು ತಿಳಿದುಬಂದಿದೆ.
ಮೊಬೈಲ್ ಗಾಗಿ ಸಹೋದರಿಯರು ಜಗಳ ಮಾಡುತ್ತಿದ್ದರು.ಅಕ್ಕ ಗುಡಿಯಬೇಬಿ ಹಾಗೂ ತಂಗಿ ಗೀತಾ ಕುಮಾರಿ ಜಗಳ ಮಾಡುತ್ತಿದ್ದರು. ಜಗಳ ಬಿಡಿಸಲು ಬಂದಿದ್ದ ಗುಡಿಯ ತಂಗಿ ರಾಜೇಶ್ ಕುಮಾರ್ ನನ್ನು ಬೇಬಿ ನಿಂದಿಸಿದ್ದಾಳೆ ಎನ್ನಲಾಗಿದೆ. ಈ ವೇಳೆ ಸಿಟ್ಟಿನಿಂದ ಅತ್ತಿಗೆ ಮೇಲೆ ದೊಣ್ಣೆಯಿಂದ ಮೈದುನ ಥಳಿಸಿದ್ದಾನೆ.
ಹಲ್ಲೆಗೊಳಗಾದ ಗುಡಿಯ ಬೇಬಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಗುಡಿಯ ಬೇಬಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಗುಡಿಯ ಬೇಬಿ ಸಾವನ್ನಪ್ಪಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.