ಮೈಸೂರು : ಮೈಸೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯಾಗಿರುವ ಸತೀಶ್ ಜೈಲಿನಿಂದ ರಿಲೀಸ್ ಆಗಿದ್ದಾನೆ.
ಪ್ರಚೋದನಕಾರಿ ಪೋಸ್ಟ್ ಮಾಡಿದ ಆರೋಪಿ ಸತೀಶ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಜಾಮೀನಿನ ಮೇಲೆ ಇಂದು ಜೈಲಿನಿಂದ ಸತೀಶ್ ಬಿಡುಗಡೆಯಾಗಿದ್ದಾನೆ. ನಿನ್ನೆ ಸತೀಶ್ ಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಮೈಸೂರಿನ 2ನೇ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಒಬ್ಬರ ಶೂರಿಟಿ ತೆಗೆದುಕೊಂಡು ಕೋರ್ಟ್ ಬಿಡುಗಡೆಗೆ ಸೂಚಿಸಿತ್ತು. ನಿನ್ನೆ ಸಂಜೆ ತಡವಾದ ಕಾರಣ ಸತೀಶ್ ಬಿಡುಗಡೆಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಜಾಮೀನು ಪ್ರಕ್ರಿಯೆ ಮುಗಿಸಿ ಸತೀಶ್ ಬಿಡುಗಡೆಯಾಗಿದ್ದಾನೆ.