ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಅಪಾರ್ಟ್ಮೆಂಟ್ ಒಂದಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಅಲ್ಲಿ ರೌಡಿಶೀಟರ್ ಮತ್ತು ಅವರ ನಡುವೆ ಗಲಾಟೆ ನಡೆದಿದ್ದು ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದಾಗ ದುಷ್ಕರ್ಮಿಗಳು ರೌಡಿಶೀಟರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಅಲ್ಲದೆ ಶವವನ್ನು ತಮಿಳುನಾಡಿಗೆ ಸಾಗಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಹಣಕಾಸು ವಿಚಾರ ಸಂಬಂಧ ರೌಡಿ ಶೀಟರ್‌ನನ್ನು ಅಪಾಟ್ ೯ಮೆಂಟ್‌ಗೆ ಕರೆಸಿಕೊಂಡು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊತ್ತನೂರು ನಿವಾಸಿ ಗುಣ(30) ಕೊಲೆ ಯಾದ ರೌಡಿ ಎಂದು ತಿಳಿದುಬಂದಿದೆ. ಜ.10ರಂದು ಕೊತ್ತನೂರಿನ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್ ನಿವಾಸಿ ಬ್ರಿಜೇಶ್ ಎಂಬಾತನ ರೌಡಿ ಗುಣನನ್ನು ಅಪಾರ್ಟ್‌ಮೆಂಟ್ ಗೆ ಕರೆಸಿಕೊಂಡು ಬಳಿಕ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.
ಕೊಲೆಯಾದ ಗುಣನ ಮೃತದೇಹ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಮೃತ ಗುಣನ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬ್ರಿಜೇಶ್ ಸೇರಿ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೌಡಿ ಶೀಟರ್ ಗುಣ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೊತ್ತನೂರಿನಲ್ಲಿ ನೆಲೆಸಿದ್ದ. ಗುಣ ನಾಯಿ ಸಾಕಿ ಮಾರಾಟ ಮಾಡುತ್ತಿದ್ದ.
ಜ.10ರಂದು ಮಧ್ಯಾಹ್ನ ಕೆಲಸ ಇದೆ ಎಂದು ಮನೆಯಲ್ಲಿ ಹೇಳಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ಗೆ ತೆರಳಿದ್ದ. ಗುಣ ಜತೆಗೆ ತೆರಳಿದ್ದ ಚಂದ್ರು ಎಂಬಾತ ಅಪಾಟ್ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲೇ ಕಾದು ನಿಂತಿದ್ದಾನೆ. ಎಷ್ಟು ಹೊತ್ತು ಕಳೆದರೂ ಗುಣ ವಾಪಾಸ್ ಬಾರದಿದ್ದರಿಂದ ಆತನ ಮೊಬೈಲ್‌ಗೆ ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿ ಕರೆ ಸ್ವೀಕರಿಸಿ ಪ್ರಕರಣವೊಂದರ ಸಂಬಂಧ ವಿಚಾರಣೆಗಾಗಿ ಗುಣನನ್ನು ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದಿದ್ದಾನೆ.
ಬಳಿಕ ಚಂದ್ರು ವಾಪಾಸ್ ಆಗಿದ್ದಾನೆ. ಮತ್ತೊಂದೆಡೆ ಸಂಜೆಯಾದರೂ ಮನೆಗೆ ಪತಿ ಗುಣ ವಾಪಾಸ್ ಆಗಾದ ಹಿನ್ನೆಲೆಯಲ್ಲಿ ಪತ್ನಿ ಬಾಗಲೂರು ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ, ಅಪಾರ್ಟ್‌ಮೆಂಟ್ ನಿವಾಸಿ ಬ್ರಿಜೇಶ್ ಹಾಗೂ ಮತ್ತೊಬ್ಬ ಅಂದು ಮೃತದೇಹವೊಂದನ್ನು ಬೆಡ್‌ಶಿಟ್‌ನಲ್ಲಿ ಸುತ್ತಿಕೊಂಡು ಲಿಫ್ಟ್ ನಲ್ಲಿ ಹೊರಗೆ ಸಾಗಿಸುತ್ತಿರುವುದು ಕಂಡು ಬಂದಿದೆ.