ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್ ಒಬ್ಬ ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸಿದ್ದಾಪುರದ ಅತಿಕ್ ಮಸೀದಿ ಬಳಿ ಈ ಒಂದು ಘಟನೆ ನಡೆದಿದೆ.
ರೌಡಿಶೀಟರ್ ಒಂಟಿ ಕೈ ವೆಂಕಟೇಶ್ ಮಚ್ಚಿನಿಂದ ದಾಳಿ ಮಾಡಿ ತನ್ನ ಸ್ನೇಹಿತ ಸಯ್ಯದ್ ಇಸಾಕ್ (31) ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇಬ್ಬರಿಂದ ಈ ಒಂದು ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಸಿದ್ದಾಪುರದ ಅತಿಕ್ ಮಸೀದಿ ಬಳಿ ಈ ಒಂದು ಘಟನೆ ನಡೆದಿದೆ. ಗೆಳೆಯನ ಪತ್ನಿ ಜೊತೆ ಸೈಯದ್ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ವಿಚಾರದಲ್ಲಿ ಮಿಸ್ಸಿಂಗ್ ಪ್ರಕರಣ ಸಹ ದಾಖಲಾಗಿತ್ತು.
ಈ ವಿಚಾರವಾಗಿ ಒಂಟಿ ಕೈ ವೆಂಕಟೇಶ್ ಆತನಿಗೆ ಬುದ್ಧಿ ಮಾತು ಹೇಳಿದ್ದ. ಅದಾದ ಬಳಿಕ ವೆಂಕಟೇಶನನ್ನೇ ಕೊಲೆ ಮಾಡುತ್ತೇನೆ ಎಂದು ಸೈಯದ್ ಇಸಾಕ್ ಓಡಾಡುತ್ತಿದ್ದ.ಇದೇ ವಿಚಾರವಾಗಿ ವೆಂಕಟೇಶ್ ರಾತ್ರಿ ಇಸಾಕ್ ಬೇಟಿಯಾಗಿದ್ದ. ಈ ವೇಳೆ ಜಗಳ ತಾರಕಕ್ಕೆ ಏರಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ವೆಂಕಟೇಶ್ ಪರಾರಿಯಾಗಿದ್ದಾನೆ.ಘಟನೆ ಸಂಭಂದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.