ಬೆಂಗಳೂರು : ಬೆಂಗಳೂರಿನಲ್ಲಿ ಶಾಲೆಯೊಂದರಲ್ಲಿ ಪ್ರಾಂಶುಪಾಲೆ ವಿದ್ಯಾರ್ಥಿನಿ ಮೇಲೆ ದರ್ಪ ತೋರಿದ್ದು, ಬೆತ್ತದಲ್ಲಿ ಬಾಸುಂಡೆ ಮೂಡೋ ಹಾಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಬೆಂಗಳೂರು ನಗರದ ಹೊರವಲಯದ ದೇವನಹಳ್ಳಿಯ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಶಾಲೆಯಲ್ಲಿ ಓದುತ್ತಿದ್ದ 5ನೇ ತರಗತಿಯ ವಿದ್ಯಾರ್ಥಿನಿಗೆ ಬೆತ್ತದ ಮೂಲಕ ಥಳಿಸಿರುವ ಆರೋಪ ಇದೀಗ ಪ್ರಾಂಶುಪಾಲೆಯ ಮೇಲೆ ಬಂದಿದೆ. ತನ್ನ ಮಗನ ಸೇವೆ ಮಾಡಿಲ್ಲವೆಂದು 5ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಪ್ರಿನ್ಸಿಪಾಲ್ ಉಷಾ ಕಿರಣ್ ಹಲ್ಲೆ ಮಾಡಿದ ಆರೋಪ ಇದೀಗ ಕೇಳಿಬಂದಿದೆ.
ಅಲ್ಲದೇ ಮಗನ ಸೇವೆ ಮಾಡಲಿಲ್ಲ ಎಂದು ವಿದ್ಯಾರ್ಥಿನಿಯ ಮೇಲೆ ಪ್ರಾಂಶುಪಾಲೆ ಹಲ್ಲೆ ಮಾಡಿದ್ದಾಳೆ. ದೇವನಹಳ್ಳಿಯ ವಿಜಯಪುರದಲ್ಲಿ ನಡೆದಿದೆ ಪ್ರಾಂಶುಪಾಲೆ ಉಷಾ ಕಿರಣ್ ವಿರುದ್ಧ ಇದೀಗ ಪೋಷಕರು ಆಕ್ರೋಶ ಹೊರ ಹಾಕಿದ್ದು ಘಟನ ಸ್ಥಳಕ್ಕೆ ವಿಜಯಪುರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.
ನನ್ನ ಮಗ ಒಬ್ಬ ವಿಶೇಷ ಚೇತನ ಅವನಿಗೆ ತಿರುಗಾಡಲು ಆಗಲ್ಲ. ನನ್ನ ಮಗು ವಿಶೇಷ ಚೇತನ ಇದೆ. ಅವನಿಗೆ ಸಹಾಯ ಬೇಕಾಗುತ್ತದೆ. ನಾನು ಹೊಡೆಯಬಾರದಿತ್ತು ನನ್ನಿಂದ ತಪ್ಪಾಗಿದೆ. ಶಾಲೆಯಲ್ಲಿ ಕೆಲವೊಮ್ಮೆ ಮಕ್ಕಳ ಸಹಾಯ ಬೇಕಾಗುತ್ತದೆ ನಾನು ಆ ಮಗುವಿನ ಕೈ ಮತ್ತು ಕಾಲಿಗೆ ಹೊಡೆದಿದ್ದೇನೆ ಎಂದು ಪ್ರಿನ್ಸಿಪಾಲ್ ಉಷಾ ಕಿರಣ್ ತಪ್ಪು ಒಪ್ಪಿಕೊಂಡಿದ್ದಾರೆ.