ಬೆಂಗಳೂರು : ಮೊದಲೇ ರಾಜ್ಯದಲ್ಲಿ ಸಿಲಿಂಡರ್ ಇಲ್ಲದೆ ಗ್ರಾಹಕರು ಹಾಗೂ ಆಟೋ ಚಾಲಕರು ಪರದಾಡುತ್ತಿದ್ದರೆ, ಇತ್ತ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸಿಲಿಂಡರ್ ಅಭಾವದಿಂದ ಸಂಕಷ್ಟ ಎದುರಾಗಿದ್ದು ಇದೀಗ ಕಳ್ಳನೊಬ್ಬ ಹೆಲ್ಮೆಟ್ ಹಾಕಿಕೊಂಡು ಬಂದು ಸಿಲಿಂಡರ್ ಕದ್ದು ಹೋಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಮನೆ ಗೇಟ್ ತೆಗೆದು ಸಿಲಿಂಡರ್ ಕದ್ದು ಬೈಕ್ ನಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗಿದ್ದಾನೆ. ನಿನ್ನೆ ನಸುಕಿನ ಜಾವ ಸುಮಾರು 3 ಗಂಟೆಗೆ ಈ ಒಂದು ಘಟನೆ ನಡೆದಿದೆ. ಬೈಕ್ ನಲ್ಲಿ ಬಂದು ಗೇಟ್ ಓಪನ್ ಮಾಡಿ ಸಿಲಿಂಡರ್ ತೆಗೆದುಕೊಂಡು ಬೈಕ್ ಮೇಲೆ ಇಟ್ಟುಕೊಂಡು ಎಸ್ಕೇಪ್ ಆಗಿದ್ದಾನೆ. ಮೊದಲೇ ಈ ಮನೇಲಿ ಸಿಲಿಂಡರ್ ಇದೆ ಎಂದು ಗಮನಿಸಿ ಸ್ಕೆಚ್ ಹಾಕಿದ್ದ ಕಳ್ಳ ನಸುಕಿನ ಜಾವ 3 ಗಂಟೆಗೆ ಬಂದು ಸಿಲಿಂಡರ್ ಕಳ್ಳತನ ಮಾಡಿದ್ದಾನೆ.








