ಬೆಂಗಳೂರು : ಬೆಂಗಳೂರಿನಲ್ಲಿ ತಾಯಿಯಿಂದಲೇ ಮಗುವಿನ ಕಿಡ್ನಾಪ್ ಮಾಡಿರುವ ಘಟನೆ ನಡೆದಿದ್ದು, ಮಗುವನ್ನು ಎಳೆದೊಯ್ಯುವ ದೃಶ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಘಟನೆಯು ಬೆಂಗಳೂರಿನ ಕೆಆರ್. ಪುರಂ ನಲ್ಲಿ ನಡೆದಿದೆ.
ಮಗುವಿನ ತಾಯಿ ಅನುಪಮಾ ಮತ್ತು ಸ್ನೇಹಿತನಿಂದ ಈ ಒಂದು ಕೃತ್ಯ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಕೆಆರ್ ಪುರಂನಲ್ಲಿ ಈ ಒಂದು ಘಟನೆ ನಡೆದಿದೆ. ಶಾಲೆಗೆ ಹೋಗಲು ಅಪಾರ್ಟ್ಮೆಂಟ್ ಒಂದೇ ಮಗು ನಿಂತಿತ್ತು. ಶಾಲೆ ಬಸ್ ಹತ್ತಿಸಲು ಮಗುವಿನ ತಾತ ಕಾಯುತ್ತಾ ಅಪಾರ್ಟ್ಮೆಂಟ್ ಎದುರುಗಡೆ ನಿಂತಿದ್ದರು. ಈ ವೇಳೆ ತಾತನನ್ನು ತಳ್ಳಿ ಅನುಪಮ ಮತ್ತು ಸ್ನೇಹಿತ ಮಗುವನ್ನು ಹೊತ್ತುಕೊಂಡು ಹೋಗಿದ್ದಾರೆ.
ಇನ್ನೂ ಈ ಒಂದು ಘಟನೆಗೆ ಅನುಪಮ ಮತ್ತು ಆಕೆಯ ಪತಿ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗುತ್ತಿದೆ. ನ್ಯಾಯಾಲಯದಲ್ಲಿ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಮಗು ತಂದೆಯ ಬಳಿಯೇ ಇರಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅನುಪಮಾ ಹಾಗೂ ಆಕೆಯ ಸ್ನೇಹಿತ ಈ ಕೃತ್ಯ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಇನ್ನು ಈ ಕುರಿತು ಕೆಆರ್ ಪುರಂ ಠಾಣಾ ಪೋಲೀಸರು ಘಟನೆ ಕುರಿತಂತೆ ನಮಗೆ ಯಾವುದೇ ರೀತಿಯಾದಂತಹ ದೂರು ಬಂದಿಲ್ಲ. ಒಂದು ವೇಳೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೆಆರ್ ಪುರಂ ಠಾಣೆಯ ಪೊಲೀಸರು ತಿಳಿಸಿದ್ದಾರೆ.