ಬೆಂಗಳೂರು : ಕಳೆದ ಎಪ್ರಿಲ್ 10 ರಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳನ್ನು ಕೊಂದು ಜೈಲು ಸೇರಿದ್ದ ತಾಯಿಯೊಬ್ಬಳು ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಗಂಗಾದೇವಿ(30) ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಜಾಲಹಳ್ಳಿಯಲ್ಲಿ ಕಳೆದ ಏಪ್ರಿಲ್ 10 ರಂದು ಮುಂಜಾನೆ ಇಬ್ಬರು ಮಕ್ಕಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿ, ಗಂಗಾದೇವಿ ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾಳೆ.ಭೋವಿ ಕಾಲೊನಿ ನಿವಾಸಿ ಗಂಗಾದೇವಿ(30) ಪೊಲೀಸ್ ಠಾಣೆಗೆ ಶರಣಾಗಿದ್ದಳು.
ಗುರುವಾರ ರಾತ್ರಿ ಸೆಂಟ್ರಲ್ ಜೈಲಿಗೆ ಗಂಗಾದೇವಿ ಸೇರಿದಳು.ಗುರುವಾರ ರಾತ್ರಿ ಜೈಲಿನ ಶೌಚಾಲಯದಲ್ಲಿ ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಸೀರೆಯಿಂದ ನೇಣು ತೆಗೆದುಕೊಂಡು ಗಂಗಾದೇವಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಆರೋಪಿ ಮಹಿಳೆ ತನ್ನ ಮಕ್ಕಳಾದ ಲಕ್ಷ್ಮಿ(7) ಹಾಗೂ ಗೌತಮ್(9)ನನ್ನು ಕೊಲೆ ಮಾಡಿದ್ದಳು.ಕೌಟುಂಬಿಕ ಕಲಹದಿಂದ ಮಕ್ಕಳನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಮಹಿಳೆ ಹೇಳಿದ್ದಾಳೆ ಎಂದು ಪೊಲೀಸರು ಹೇಳಿದ್ದರು. ಇದೀಗ ಪರಪ್ಪನ ಅಗ್ರಹಾರದಲ್ಲಿ ತಾಯಿ ಗಂಗಾದೇವಿ ನೇಣಿಗೆ ಶರಣಾಗಿದ್ದಾಳೆ.