ಬೆಂಗಳೂರು : ಬೆಂಗಳೂರಿನಲ್ಲಿ ಭೀಕರ ಕೊಲೆಯಾಗಿದ್ದು ಪ್ರತಿಯೊಬ್ಬ ಇನ್ಸ್ಟಾಗ್ರಾಮ್ ಲೈವ್ ಗೆ ಬಂದು ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ತಬರೇಜ್ ಪಾಷಾ ಎಂಬಾತ ಪತ್ನಿ ಫಾಜಿಲ್ ಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.ಒಂಬತ್ತು ವರ್ಷದ ಹಿಂದೆ ಫಾಜಿಲಾ ಮದುವೆಯಾಗಿದ್ದ ಎನ್ನಲಾಗಿದೆ. ತಬರೇಜ್ ಹಾಗೂ ಫಾಜಿಲ್ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಈ ಮಧ್ಯ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಫಾಜಿಲ್ ತಾಯಿ ಮನೆಯಲ್ಲಿದ್ದಳು. ಕಳೆದ ಎರಡು ವರ್ಷದಿಂದ ತಾಯಿ ಮನೆಯಲ್ಲಿ ವಾಸವಿದ್ದಳು.
ಮಕ್ಕಳು ಶಾಲೆಗೆ ಹೋದಾಗ ಮನೆಗೆ ನುಗ್ಗಿ ಚಾಕುವಿರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಚಾಮರಾಜಪೇಟೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಾಕು ಇರಿದು ಪತ್ನಿಯನ್ನು ಕೊಲೆ ಮಾಡಿದ ನಂತರ ಪತಿ ಅಲ್ಲಿಂದ ಪರಾರಿಯಾಗಿದ್ದಾನೆ ಇದೀಗ ಪೊಲೀಸರು ಆತನಿಗಾಗಿ ಬಲೇಬೀಸಿದ್ದಾರೆ.