ಬೆಂಗಳೂರು : ಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲವೆಂದು ದಂಪತಿಗಳ ನಡುವೆ ಗಲಾಟೆ ನಡೆಯಲಿದೆ ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತ್ನಿಯನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ನಡೆದಿದೆ.
ಹೌದು ಕೊಲೆಯಾದ ಮಹಿಳೆಯನ್ನು ಕಾವ್ಯ (27) ಎಂದು ತಿಳಿದುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಪತ್ನಿ ಕಾವ್ಯಳನ್ನು ಕೊಲೆ ಮಾಡಿ ಪತಿ ಶಿವಾನಂದ್ ಪರಾರಿಯಾಗಿದ್ದಾನೆ. ಕಾವ್ಯ ಪೋಷಕರ ದೂರಿನ ಅನ್ವಯ ಇದೀಗ ಶಿವಾನಂದ್ ನನ್ನ ಪೊಲೀಸರು ಬಂಧಿಸಿದ್ದಾರೆ.
ತಿಂಗಳ ಹಿಂದೆ ಗಲಾಟೆ ಮಾಡಿ ಕಾವ್ಯ ತವರುಮನೆ ಸೇರಿದ್ದಳು. ಈ ವೇಳೆ ಶಿವಾನಂದ ವಾರದ ಹಿಂದೆ ಅಷ್ಟೇ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಹಬ್ಬಕ್ಕೆ ಬಟ್ಟೆ ಕೊಡಿಸುತ್ತೇನೆ ಎಂದು ಕೊಡಿಸಿಲ್ಲ ಎಂದು ಕಾವ್ಯ ಗಲಾಟೆ ಮಾಡಿದ್ದಾಳೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಪೆಟ್ರೋಲ್ ಸುರೋದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಘಟನೆ ಕುರಿತಂತೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.