ಬೆಂಗಳೂರು : ವರದಕ್ಷಿಣೆ ಕಿರುಕುಳ, ದೈಹಿಕವಾಗಿ ಹಲ್ಲೆ ಇತರೆ ಕಾರಣಗಳಿಂದ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಆದರೆ ಇದೀಗ ಪತ್ನಿಯರ ಕಾಟಕ್ಕೆ ಗಂಡಂದಿರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, ಪತ್ನಿಯ ಮನೆಯಲ್ಲಿಯೇ ಪ್ರತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೌದು ಪತ್ನಿ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಾಗರಭಾವಿಯ ಎನ್ಜಿಎಫ್ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂದ ವ್ಯಕ್ತಿಯನ್ನು ಮಂಜುನಾಥ್ (39) ಎಂದು ತಿಳಿದುಬಂದಿದೆ. ಕ್ಯಾಬ್ ಡ್ರೈವರ್ ಆಗಿದ್ದ ಮಂಜುನಾಥ್ 2013ರಲ್ಲಿ ನಯನಳೊಂದಿಗೆ ಮದುವೆಯಾಗಿದ್ದ. ಇದೀಗ ದಂಪತಿಗಳಿಗೆ 9 ವರ್ಷದ ಮಗ ಕೂಡ ಇದ್ದಾನೆ.
ಆದರೆ ಕಳೆದ ಎರಡು ವರ್ಷಗಳಿಂದ ಇವರಿಬ್ಬರ ಮಧ್ಯ ವೈಮನಸ್ಸು ಉಂಟಾಗಿದೆ.ಹಾಗಾಗಿ 2022 ರಲ್ಲಿ ಇಬ್ಬರು ಡೈವೋರ್ಸ್ ಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.ಈ ಮಧ್ಯೆ ಹೆಂಡತಿಯ ಬಳಿ ಡಿವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್ಜಿಎಫ್ ಲೇಔಟ್ನಲ್ಲಿರುವ ಹೆಂಡತಿ ಮನೆಗೆ ಬಂದಿದ್ದರು. ಆದರೆ ಇದಕ್ಕೆ ಪತ್ನಿ ನಯನ ನಿರಾಕರಿಸಿದ್ದಾಳೆ.
ಈ ವೇಳೆ ಇದಕ್ಕೆ ಒಪ್ಪದ ಪತ್ಮಿ ನಯನ ನೀನು ನನಗೆ ಸಾಕಷ್ಟು ಹಿಂಸೆ ಕೊಟ್ಟಿದ್ದೀಯ, ನಾನು ನಿನ್ನ ಜೊತೆ ಬರೋದಿಲ್ಲ ಎಂದು ಹೇಳಿದ್ದಳು.ಇದರಿಂದ ಮನನೊಂದ ಮಂಜುನಾಥ್ 10:30ರ ಸುಮಾರಿಗೆ ಪೆಟ್ರೋಲ್ ತಂದು ಆಕೆಯ ಮನೆಯಲ್ಲಿಯೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಜಾನ್ಞಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.