ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು, ಆಸ್ತಿಯ ವಿವಾದ ಹಿನ್ನೆಲೆಯಲ್ಲಿ ಪತಿಯೊಬ್ಬ ಮಗನ ಜೊತೆ ಸೇರಿ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ, ಕನಕಪುರ ತಾಲೂಕಿನ ಕುರುಬರ ದೊಡ್ಡಿ ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕುರುಬರ ದೊಡ್ಡಿಯಲ್ಲಿ, ಜಮೀನಿನಲ್ಲಿ ಮಾರಕಾಸುರದಿಂದ ಹೊಡೆದು ಗೌರಮ್ಮ (45) ಎನ್ನುವ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಹಲವು ವರ್ಷಗಳಿಂದ ಪತಿ ಮತ್ತು ಮಗನಿಂದ ಗೌರಮ್ಮ ದೂರ ಇದ್ದರು. ತನ್ನ ಹೆಸರಿನಲ್ಲಿದ್ದ ಜಮೀನು, ಮಾರಾಟಕ್ಕೆ ಗೌರಮ್ಮ ಮುಂದಾಗಿದ್ದರು. ಇದೇ ವಿಚಾರವಾಗಿ ಗಂಡ ಹೆಂಡತಿಯ ನಡುವೆ ಜಗಳ ಆಗಿತ್ತು. ಗೌರಮ್ಮ ಪತಿ ಶಿವರಾಜು (48) ಮತ್ತು ಮಗ ಸಿದ್ದರಾಜು (28) ನನ್ನು ಕನಕಪುರ ಗ್ರಾಮಾಂತರ ಪೊಲೀಸರು ಅರೆಸ್ಟ್ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.