ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಅಮಾನುಷವಾದ ಘಟನೆ ನಡೆದಿದ್ದು, ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಕ್ಷಸ ಪತಿಯೊಬ್ಬ ಆಕೆಯ ಬಾಯಿಗೆ ಫೆವಿಕ್ವೀಕ್ ಹಾಕಿ ಭೀಕರವಾಗಿ ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹಾರೋಕ್ಯಾತನಹಳ್ಳಿ ಎಂಬಲ್ಲಿ ನಡೆದಿದೆ.
ಹೌದು ಅನೈತಿಕ ಸಂಬಂಧ ಶಂಕೆ ಪತ್ನಿಯ ಹತ್ಯೆಗೆ ಯತ್ನಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿ ಯಲ್ಲಿ ನಡೆದಿದೆ. ಸಿದ್ಧಾಂಲಿಂಗಯ್ಯ ಪತ್ನಿ ಮಂಜಳಳನ್ನು ಕೊಲೆಗೆ ಯತ್ನಿಸಿದ್ದಾನೆ. ಪತಿ ಹಿಮಾಲಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಮಂಜುಳಾ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು.ಪ್ರಕರಣ ಕುರಿತು ಮಾದನಾಯಕನಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಟವರ್ ಲೊಕೇಶನ್ ಆಧರಿಸಿ ಆರೋಪಿ ಪತಿ ಸಿದ್ದಲಿಂಗಯ್ಯನನ್ನು ಬಂಧಿಸಲಾಗಿದೆ. ಕಳೆದ 10 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದು, ರಾಯಚೂರಲ್ಲಿ ಇಬ್ಬರು ಮಕ್ಕಳು ಇದ್ದಾರೆ ಎಂದು ತಿಳಿದುಬಂದಿದೆ.