ಬೆಂಗಳೂರು : ಮಾಜಿ ಸ್ಕೂಲ್ ಲವರ್ ಗೆ ಖಾಸಗಿ ವೀಡಿಯೋ ತೋರಿಸಿ ಹಣ ಪೀಕುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮೋಹನ್ ಕುಮಾರ್ ಬಂಧಿತ ಆರೋಪಿ. ಬೆಂಗಳೂರಿನ ಚಾಮರಾಜಪೇಟೆಯ 19 ವರ್ಷದ ಯುವತಿಗೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬಂಧಿಸಿದ್ದಾರೆ.
ಆರೋಪಿ ಚಾಮರಾಜಪೇಟೆಯ 19 ವರ್ಷದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ 2019ರಿಂದ 2.57 ಕೋಟಿ ರೂ.ಸುಲಿಗೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.ದೇವನಹಳ್ಳಿಯ ಖಾಸಗಿ ಶಾಲೆಯಲ್ಲಿ ಸಂತ್ರಸ್ತೆ ಓದುತ್ತಿದ್ದ ವೇಳೆ ಆರೋಪಿಯ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅಲ್ಲದೆ, ಸಂತ್ರಸ್ತೆಯನ್ನು ಪುಸಲಾಯಿಸಿ ಪ್ರವಾಸಿ ತಾಣಗಳಿಗೆ ಕರೆದೊಯ್ದ ಆರೋಪಿ, ಮದುವೆಯಾಗುವುದಾಗಿ ನಂಬಿಸಿ ಆಕೆ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.
ಆರೋಪಿಯು ಯುವತಿಯನ್ನು ಶಾಲೆಯಲ್ಲಿ ಓದುವಾಗಲೇ ರೆಸಾರ್ಟ್, ಪಬ್, ಪಾರ್ಟಿ, ಸಿನಿಮಾ ಹಾಗೂ ಪಾರ್ಕ್ ಎಂದೆಲ್ಲಾ ಕರೆದುಕೊಂಡು ಸುತ್ತಾಡಿದ್ದಾನೆ. ಇನ್ನು ಹುಡುಗಿ ಮನೆಯವರು ಕೋಟಿ ಕುಳ ಎಂಬುದನ್ನು ಅರಿತು ಹುಡುಗಿ ಕಡೆಯಿಂದಲೇ ಹಣ ಖರ್ಚು ಮಾಡಿಸಿದ್ದಾನೆ. ಇನ್ನು ಯುವತಿ ಅಪ್ರಾಪ್ತೆ ಆಗಿದ್ದಾಗಲೇ ಆಕೆಯನ್ನು ಹಲವು ಬಾರಿ ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ.
ಆಗ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆಯ ಖಾಸಗಿ ಫೋಟೋ, ವಿಡಿಯೋ ಸಂಗ್ರಹ ಮಾಡಿಟ್ಟುಕೊಂಡಿದ್ದಾನೆ. ನಂತರ, ನನಗೆ ಏನೋ ಸ್ವಲ್ಪ ಹಣ ಬೇಕಿದೆ ಕೊಡು ಎಂದಯ ಕೇಳಿದಾಗ ಯುವತಿ ನಿರಾಕರಣೆ ಮಾಡಿದ್ದಾಳೆ. ಆಗ ನೀನು ಹಣ ಕೊಡದಿದ್ದರೆ ನಿನ್ನ ಖಾಸಗಿ ಫೋಟೋ ಸೋಶಿಯಲ್ ಮೀಡಿಯಾಗೆ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಲು ಆಕೆ ಒಪ್ಪದಿದ್ದಾಗ ನೇರವಾಗಿ ಮನೆಯವರಿಗೆ ಫೋಟೋ ಕಳುಹಿಸಿ ಸೋಶಿಯಲ್ ಮೀಡಿಯಾಗೆ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.