ಬೆಂಗಳೂರು : ಬೆಂಗಳೂರು ನಗರದ ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ ಆರೋಪಿ ಕಾರ್ತಿಕ್‌ನನ್ನು ಶಿವಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಳೆದ ಏಪ್ರಿಲ್ 13 ರಂದು ಊಟ ಮುಗಿಸಿ ಎರಡನೇ ಮಹಡಿಗೆ ಮಲಗಲು ಓರ್ವ ಮಹಿಳೆ ತೆರಳುತ್ತಿದ್ದರು. ಈ ವೇಳೆ ಎದುರು ಮನೆಯಲ್ಲಿ ವಾಸವಾಗಿರುವ ಆರೋಪಿ ಕಾರ್ತಿಕ್ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ. ಇದನ್ನು ಪ್ರಶ್ನೆ ಮಾಡಿದ ಮಹಿಳೆ ಪತಿ ಮೇಲೆ ಮತ್ತು ಜಗಳ ಬಿಡಿಸಲು ಬಂದವರ ಮೇಲೂ ಆರೋಪಿ ಅಟ್ಯಾಕ್ ಮಾಡಿದ್ದ. ಎರಡನೇ ಮಹಡಿಯಿಂದ ಹಾಲೋ ಬ್ಲಾಕ್, ಹೂವಿನ ಪಾಟ್ ಕೆಳ ಮಹಡಿಯಲ್ಲಿದ್ದವರ ಮೇಲೆ ಎಸೆದಿದ್ದ.
ಘಟನೆಯಲ್ಲಿ ಏಳು ಜನರಿಗೆ ಗಾಯವಾಗಿತ್ತು.ಇದೀಗ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಶಿವಾಜಿ ನಗರ ಪೊಲೀಸರು ಆರೋಪಿ ಕಾರ್ತಿಕ್‌ನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ವಿಚಾರಣೆ ವೇಳೆ ನಾನು ಮೂತ್ರವಿಸರ್ಜನೆ ಮಾಡುತ್ತಿದೆ. ಆ ಸಮಯದಲ್ಲಿ ಮಹಿಳೆ ಬಂದಿದ್ದಾಳೆ. ಈ ವೇಳೆ ಗಲಾಟೆಯಾಗಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.