ಬೆಂಗಳೂರು : ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಪ್ರಿಯಕರನೊಬ್ಬ ವಿಷ ಹಾಕಿ ಕೊಂದಿದ್ದು ಇದೀಗ ಪೋಲೀಸರ ತನಿಖೆಯ ಬೆಳಕಿಗೆ ಬಂದಿದೆ. ಜನವರಿ 1 ರಂದು ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಕೊಲೆ ನಡೆದಿದ್ದು, ಘಟನೆಯ ಬಳಿಕ ಪೊಲೀಸರು ಇದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ತನಿಖೆ ಕೈಗೊಂಡಾಗ ಪ್ರಿಯಕರನೇ ಪ್ರೇಯಸಿಗೆ ವಿಷ ನೀಡಿ ಕೊಲೆ ಮಾಡಿದ್ದಾನೆ ಎಂದು ಬಹಿರಂಗವಾಗಿದೆ..
ಹೌದು ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೀಪಂ ನಿವಾಸದ ಅಪಾರ್ಟ್ಮೆಂಟ್ ಜನೆವರಿ 1 ರಂದು ಈ ಒಂದು ಕೊಲೆಯಾಗಿದೆ. ಆದರೆ ಈಗ ಸಾವಿನ ಸೀಕ್ರೆಟ್ ಇದೀಗ ರಿವಿಲ್ ಆಗಿದೆ. ಮೃತಳನ್ನು ಉಜ್ಮಾ ಖಾನ್ ಎಂದು ತಿಳಿದುಬಂದಿದ್ದು, ಇನ್ನು ಪ್ರಿಯಕರನನ್ನು ಇಮ್ದಾದ್ ಭಾಷಾ ಎಂದು ತಿಳಿದುಬಂದಿದೆ. ಬೇರೆ ಬೇರೆ ಮದುವೆಯಾಗಿ ಇಬ್ಬರು ಡೈವೋರ್ಸ್ ಪಡೆದಿದ್ದರು.
ಕುಂದಲಹಳಿಯ ಮನೆ ಒಂದರಲ್ಲಿ ಉಜ್ವಾ ಖಾನ್ ಮೃತಪಟ್ಟಿದ್ದಳು. ಈಕೆಯ ಪ್ರಿಯಕರ ಇಮ್ದಾದ್ ಭಾಷಾ ಆಕೆಗೂ ವಿಷ ನೀಡಿ ತಾನು ಕೂಡ ವಿಷ ಸೇವಿಸಿ ಅಸ್ವಸ್ಥನಾಗಿದ್ದ. ಬಳಿಕ ಪೊಲೀಸರು ಇದು ಒಂದು ಪ್ರಕರಣ ದಾಖಲಿಸಿದ್ದರು. ಆದರೆ ತನಿಖೆಯ ವೇಳೆ ಎಂದಾದ್ ಭಾಷಾ ಉಜ್ಮಾ ಖಾನ್ ಗೆ ಬೇರೆ ಮದುವೆಯಾಗಿರುವ ವಿಚಾರ ತಿಳಿದು ಆತನೇ ವಿಷ ಹಾಕಿ ಕೊಂದಿದ್ದಾನೆ ಎನ್ನಲಾಗಿದೆ ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.