ಬೆಂಗಳೂರು : ಮನೆಯ ಕಾರ್ಯಕ್ರಮಕ್ಕೆ ಎಂದು ಬಂದಿದ್ದ ಫೋಟೋಗ್ರಾಫರ್ ಒಬ್ಬ ಯುವತಿಯನ್ನು ಪರಿಚಯ ಮಾಡಿಕೊಂಡು ಆಕೆಯ ಜೊತೆ ಲವ್ ನಾಟಕವಾಡಿ ಬಳಿಕ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಎಸಗಿದ್ದ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೆಂಗಳೂರಿನ ನೆಲಮಂಗಲ ಠಾಣೆಯ ಪೊಲೀಸರು ಆರೋಪಿ ಯುವಕನನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ನೆಲಮಂಗಲದಲ್ಲಿ ಈ ಒಂದು ಲವ್ ಸೆಕ್ಸ್ ದೋಖಾ ಪ್ರಕರಣ ನಡೆದಿತ್ತು. ಯುವತಿಗೆ ವಂಚಿಸಿದ್ದ ಆರೋಪಿ ಮಧುವನ್ನು ಈಗ ಅರೆಸ್ಟ್ ಮಾಡಿದ್ದಾರೆ. ಫೋಟೋಗ್ರಾಫರ್ ಮಧು ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಫೋಟೋ ತೆಗೆಯಲು ಹೋದಾಗ ಪರಸ್ಪರ ಯುವತಿ ಮತ್ತು ಫೋಟೋಗ್ರಾಫರ್ ನಡುವೆ ಪರಿಚಯವಾಗಿದೆ.ಮನೆಯ ಕಾರ್ಯಕ್ರಮಕ್ಕೆ ಮಧು ಫೋಟೋ ತೆಗೆಯಲು ಬಂದಿದ್ದ.
ಮದುವೆಯಾಗುವುದಾಗಿ ನಂಬಿಸಿ ಆರೋಪಿ ಮಧು ಯುವತಿಗೆ ವಂಚಿಸಿದ್ದಾನೆ. ಮನೆಯ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಹಾಗಾಗಿ ಮಧು ಕುಟುಂಬಸ್ಥರ ವಿರುದ್ಧ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ. ಅಲ್ಲದೆ ಇತ್ತೀಚಿಗೆ ಆತ ಮೈಸೂರಿನ ಮತ್ತೊಬ್ಬ ಯುವತಿಯೊಂದಿಗೆ ಮದುವೆ ಕೂಡ ಸಿದ್ಧತೆ ನಡೆಸಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಯುವತಿ ಮಾತನಾಡಿದ್ದು, ಖಾಸಗಿ ಕ್ಷಣದ ವಿಡಿಯೋ ತೋರಿಸಿ ಬ್ಲಾಕ್ ಮೆಲ್ ಮಾಡಿದ್ದಾನೆ. ತಾನು ಹೇಳಿದಾಗಲೆಲ್ಲ ಬರಬೇಕು ಎಂದು ಮಧು ಬೆದರಿಸಿದ್ದಾನೆ. ಹೇಳಿದಾಗ ಬರೆದಿದ್ದರೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದ. ಸಂಬಂಧಿಕರಿಗೆಲ್ಲಾ ತೋರಿಸುವದಾಗಿ ಮಧು ಹೆದರಿಸಿದ್ದ.
ಮಧು ನನ್ನ ದಾಬಸ್ ಪೇಟೆ ಲಾಡ್ಜ್, ಹೆಸರಘಟ್ಟ ಬಳಿ ರೂಮ್ಗೆ ನನ್ನನ್ನು ಕರೆದುಕೊಂಡು ಹೋಗಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಇದೀಗ ಮೈಸೂರು ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದಾನೆ. ನನಗೆ ಅನ್ಯಾಯವಾಗಿದೆ ನ್ಯಾಯ ಬೇಕು ಎಂದು ಕೇಳಿದರೆ ಮಧು ಸಂಬಂಧಿಕರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.