ಬೆಂಗಳೂರು : ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಇಡಿ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಕಳೆದ ಎರಡು ದಿನಗಳ ಹಿಂದೆ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಫ್ರಿಜ್ನಲ್ಲಿ ಮಹಾಲಕ್ಷ್ಮಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿಯಾಗಿರುವಂತಹ ಮುಕ್ತಿ ರಂಜನ್ ರಾಯ್ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಮುಕ್ತಿ ರಂಜನ್ ರಾಯ್ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ. ಆತ ಪಶ್ಚಿಮ ಬಂಗಾಳದಲ್ಲಿ ಇದ್ದಾನೆ ಎಂದು ಪೊಲೀಸರಿಗೆ ಮಾಹಿತಿ ದೊರಕಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಆತನನ್ನು ಬಂದಿಸಲು ಬೆಂಗಳೂರಿನಿಂದ ಒಂದು ತಂಡ ತೆರಳಿತ್ತು. ಇದೀಗ ಮಹಾಲಕ್ಷ್ಮಿ ಕೊಲೆ ಆರೋಪಿ ಆಗಿರುವಂತಹ ಮುಕ್ತಿ ರಂಜನ್ ರಾಯ್ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ?
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ವೈಯ್ಯಾಲಿಕಾವಲ್ ನಲ್ಲಿ ನೇಪಾಳಿ ಮೂಲದ ಮಹಾಲಕ್ಷ್ಮಿ ಎನ್ನುವ ಮಹಿಳೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿಯ ಫೋಟೋ ಪತ್ತೆಯಾಗಿದ್ದು, ಹಂತಕನನ್ನು ಒರಿಸ್ಸಾ ಮೂಲದ ಮಹಾಲಕ್ಷ್ಮಿಯ ಸಹೋದ್ಯೋಗಿ ಮುಕ್ತಿ ರಂಜನ್ ರಾಯ್ ಎಂದು ತಿಳಿದು ಬಂದಿದೆ.
ಹೌದು ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಹೆಬ್ಬಗೋಡಿಯಲ್ಲಿ ನೆಲೆಸಿದ್ದನು. ತಮ್ಮನೊಂದಿಗೆ ಹೆಬ್ಬಗೋಡಿಯಲ್ಲಿ ವಾಸವಿದ್ದು ಪ್ರತಿನಿತ್ಯ ಮಲ್ಲೇಶ್ವರಂನ ಫ್ಯಾಶನ್ ಫ್ಯಾಕ್ಟರಿಯಲ್ಲಿ ಟೀಂ ಹೆಡ್ ಆಗಿ ಕೆಲಸ ಮಾಡುತ್ತಿದ್ದನು. ಈ ವೇಳೆ ಅದೇ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿಯನ್ನ ರಂಜನ್ ಪ್ರೀತಿಸುತ್ತಿದ್ದನು.
ಆದರೆ ಇಬ್ಬರ ಮಧ್ಯ ಅದೇನು ಮನಸ್ತಾಪ ಉಂಟಾಯಿತು ಗೊತ್ತಿಲ್ಲ. ಸೆಪ್ಟೆಂಬರ್ 1 ರಂದು ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್ ಇಬ್ಬರು ಕೆಲಸಕ್ಕೆ ಹಾಜರಾಗಿದ್ದಾರೆ. ಬಳಿಕ ಸೆಪ್ಟೆಂಬರ್ 2ರಿಂದ ಮಹಾಲಕ್ಷ್ಮಿ ವಾರದ ರಜೆ ತೆಗೆದುಕೊಂಡಿದ್ದಾಳೆ. ಸೆಪ್ಟೆಂಬರ್ 2ರಂದು ತಾಯಿಯನ್ನು ಭೇಟಿಯಾಗಲು ತಾಯಿಯ ಮನೆಗೆ ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾಳೆ.
ಆದರೆ ಅಷ್ಟರಲ್ಲಿ ಆರೋಪಿ ಮುಕ್ತಿ ರಂಜನ್ ಮಹಾಲಕ್ಷ್ಮಿಯ ಕಥೆ ಮುಗಿಸಿದ್ದಾನೆ.ಆಕೆಯನ್ನು ಭೀಕರವಾಗಿ ಕೊಂದು ತುಂಡು ತುಂಡಾಗಿ ಕತ್ತರಿಸಿ, ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಆಕೆಯ ಮೃತ ದೇಹವನ್ನು ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟು ಪರಾರಿಯಾಗಿದ್ದಾನೆ. ಸದ್ಯ ಆರೋಪಿ ಮುಕ್ತಿ ರಂಜನ್ ಪಶ್ಚಿಮ ಬಂಗಾಳದಲ್ಲಿ ಇದ್ದು ಪೊಲೀಸರಿಂದ ಕಣ್ತಪ್ಪಿಸಿ ಓಡಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.ಇದೀಗ ಕೊಲೆ ಆರೋಪಿಯಾಗಿರುವಂತಹ ಮುಕ್ತಿ ರಂಜನ್ ರಾಯ್ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.