ಬೆಂಗಳೂರು : ಪೊಲೀಸ್ ಠಾಣೆಯ ಎದುರು ಆರೋಪಿ ಒಬ್ಬ ವಕೀಲನೆಗೆ ಚಾಕು ಇರಿಗಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ತಕ್ಷಣ ಗಾಯಗೊಂಡ ವಕೀಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಧಾನಿ ‘ಮೋದಿ’ ಎಲ್ಲಿ ಸಿಕ್ಕಲ್ಲಿ ‘ಬೆಂಕಿ’ ಇಡುವ ಕೆಲಸ ಮಾಡುತ್ತಾರೆ : ಡಾ. ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಪೊಲೀಸ್ ಠಾಣೆಯ ಸಮೀಪವೆ ವಕೀಲನೆಗೆ ಚಾಕು ಇರಿದಿರುವ ಘಟನೆ ನಡೆದಿದ್ದು, ವಕೀಲ ಮಂಜುನಾಥ್ ಎನ್ನುವವರಿಗೆ ಬೆನ್ನು ಹಾಗೂ ಕೈಗೆ ಮೂರು ಬಾರಿ ಚಾಕು ಇರಿದಿರುವ ಘಟನೆ ನಡೆದಿದೆ. ಈ ವೇಳೆ ನೆರವಿಗೆ ಧಾವಿಸಿದ ಆಟೋ ಡ್ರೈವರ್ ಮೇಲು ಕೂಡ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.ತಕ್ಷಣ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಕೀಲ ಮಂಜುನಾಥ್ ಗೆ ಆನೇಕಲ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಆದರೆ ಘಟನೆಗೆ ನಿಖರವಾದಂತ ಕಾರಣ ತಿಳಿದು ಬಂದಿಲ್ಲ ಘಟನೆ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
BREAKING : ಷೇರು ಮಾರುಕಟ್ಟೆ ಕುಸಿತ ; ಸೆನ್ಸೆಕ್ಸ್, ನಿಫ್ಟಿ ಡೌನ್, ಹೂಡಿಕೆದಾರರಿಗೆ 14 ಲಕ್ಷ ಕೋಟಿ ನಷ್ಟ
ವಿದ್ಯುತ್ ಸ್ಪರ್ಶಿಸಿ ಸುಟ್ಟು ಕಾರಕಲಾದ ‘ಮೆಣಸಿನಕಾಯಿ’
ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೆಣಸಿನಕಾಯಿ ಭಸ್ಮವಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೇವರಗುಡ್ಡದಲ್ಲಿ ನಡೆದಿದೆ. ಲಾರಿಯಲ್ಲಿದ ಅಪಾರ ಪ್ರಮಾಣದ ಮೆಣಸಿನಕಾಯಿ ಸುಟ್ಟು ಕಾರಕಲಗಿರುವ ಘಟನೆ ನಡೆದಿದೆ.
BREAKING : ಸಂಸತ್ತಿನಲ್ಲಿ ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಮೆಣಸಿನಕಾಯಿಯನ್ನು ಮಾರ್ಕೆಟಿಗೆ ಸಾಗಿಸುವಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದೆ. ಈ ವೇಳೆ ಮೆಣಸಿನ ಕಾಯಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದಕ್ಕೆ ಪ್ರಯುಕ್ತ ಕಣ್ಣೀರು ಹಾಕಿರುವ ಘಟನೆ ನಡೆದಿದ್ದು ದೇವದುರ್ಗ ಪೊಲೀಸ್ ಠಾಣೆ ವ್ಯವಸ್ಥೆಯಲ್ಲಿ ಪ್ರಕರಣ ದಾಖಲಾಗಿದೆ.