ಬೆಂಗಳೂರು : ಇಂದು ಅಕ್ಷಯ ತೃತೀಯ ಹಿನ್ನೆಲೆ ಎಲ್ಲೆಡೆ ಜನರು ಚಿನ್ನ ಖರೀಡಿಸಲು ಚಿನ್ನದ ಅಂಗಡಿಗಳಿಗೆ ಮುಗಿ ಬಿದ್ದಿದ್ದಾರೆ. ಚಿನ್ನದ ದರ 1 ಲಕ್ಷಕ್ಕೆ ಏರಿಕೆಯಾದರು ಸಹ ಜನ ಚಿನ್ನ ಖರೀದಿ ಮಾಡಲು ಮುಗಿ ಬಿದ್ದಿದ್ದಾರೆ. ಇದೆ ವೇಳೆ ಇಂದು ಜ್ಯುವೆಲ್ಲರಿ ಶಾಪ್ ತೆರೆಯಲು ತೆರಳುತಿದ್ದ ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಲ್ಲಿ ಶ್ರೀರಾಮ್ ಪುರದಿಂದ ನ್ಯೂಬಿಎಲ್ ಕಡೆಗೆ ತೆರಳುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ. ಮೃತ ಸಿಬ್ಬಂದಿಯನ್ನು ಹರ್ಷ ಎಂದು ತಿಳಿದುಬಂದಿದ್ದು, ಸಚಿನ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿವೆ.ಮೃತ ಹಾಗೂ ಗಾಯಾಳು ಇಬ್ಬರು ಶ್ರೀರಾಮ ಪುರದ ನಿವಾಸಿಗಳಾಗಿದ್ದು, ಅಕ್ಷಯ ತೃತೀಯ ಹಿನ್ನಲೆ ನಿಗದಿತ ಸಮಯಕ್ಕಿಂತ ಬೇಗ ಶಾಪ್ ತೆರೆಯಲು ತೆರಳುವಾಗ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಸದಾಶಿವನಗರ ಸಂಚಾರ ಪೋಲಿಸರು ಭೇಟಿ ಮಾಡಿದ್ದು, ಮರಣೋತ್ತರ ಪರೀಕ್ಷೆಗೆಂದು ಹರ್ಷ ಮೃತದೇಹ ಎಮ್‌ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಚಿನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.