ಬೆಂಗಳೂರು : ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್ಲೈನ್ಸ್ನಲ್ಲಿ ಸರ್ವರ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಚೆಕ್ ಇನ್ ಮತ್ತು ಚೆಕ್ ಔಟ್ ಆಗೋಕೆ ಪರದಾಟ ನಡೆಸಿದ್ದಾರೆ.
ಹೌದು ಇಂಡಿಗೋ ಏರ್ಲೈನ್ಸ್ನಲ್ಲಿ ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಏರ್ಪೋರ್ಟ್ ನಲ್ಲಿ ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಈ ಒಂದು ಸಮಸ್ಯೆ ಕಾಣಿಸಿಕೊಂಡಿದೆ.
ಸಮಸ್ಯೆ ಸರ್ವರ್ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ಪ್ರಯಾಣಿಕರು ನಿಂತಿದ್ದಾರೆ. ಕೆಲ ವಿಮಾನಗಳು ಸ್ಕೇಡ್ಯೂಲ್ ಮಾಡಿಕೊಂಡ ಏರ್ಲೈನ್ಸ್ ಸಿಬ್ಬಂದಿ, ಚೆಕ್ ಇನ್ ಸಮಸ್ಯೆ ಹಿನ್ನೆಲೆಯಲ್ಲಿ ವಿಮಾನಗಳ ಟೈಪ್ ಆಫ್ ನಲ್ಲೂ ವಿಳಂಬವಾಗಿದೆ. ಬೆಳಗ್ಗೆ 11 ಗಂಟೆಯಿಂದ ಇಂಡಿಗೋ ಏರ್ಲೈನ್ಸ್ನಲ್ಲಿ ಸರ್ವಸ್ ಸಮಸ್ಯೆ ಉಂಟಾಗಿದೆ ಎಂದು ಪ್ರಯಾಣಿಕರು ಒಬ್ಬರು ಕಿಡಿ ಕಾರಿದ್ದಾರೆ.