ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಘೋರವಾದಂತಹ ದುರಂತ ಸಂಭವಿಸಿದ್ದು, ಅಪಾರ್ಟ್ಮೆಂಟ್ ಒಂದರ 20ನೇ ಮಹಡಿಯಿಂದ ಜಿಗಿದು 15 ವರ್ಷದ ಬಾಲಕಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಮಧ್ಯಪ್ರದೇಶದ ಮೂಲದ ಕುಟುಂಬವು ಅಪಾರ್ಟ್ಮೆಂಟ್ ನಲ್ಲಿ ವಾಸವಿತ್ತು. ಅವರ ಮಗಳು 15 ವರ್ಷದ ಬಾಲಕಿ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಬಾಲಕಿ ಓದುತ್ತಿದ್ದಳು ಎನ್ನಲಾಗಿದ್ದು, 15 ವರ್ಷದ ಬಾಲಕಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಘಟನಾ ಸಳಕ್ಕೆ ಕಾಡುಗೋಡಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.