ಬೆಂಗಳೂರು :ಕ್ಯಾಬ್ ಚಾಲಕ ಒಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ವೇಳೆ ಮಗನ ಶವದ ಮುಂದೆ ಕಣ್ಣೀರು ಹಾಕುತ್ತ ತಾಯಿ ಕೂಡ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಕಾವೇರಿಪುರದಲ್ಲಿ ನಡೆದಿದೆ.
ಹೌದು ನೇಣು ಬಿಗಿದುಕೊಂಡು ಕ್ಯಾಬ್ ಚಾಲಕ ಅರುಣ್ ಕುಮಾರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಆತ್ಮಹತ್ಯೆಗೆ ಶರಣಾದ ಅರುಣ್ ಕುಮಾರ್ ತಾಯಿ ಸರಸ್ವತಿ (78)ಕೂಡ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.