ಬೆಂಗಳೂರು : ಬಾಲಕಿಯೊಬ್ಬಳು ಆಟವಾಡುವಾಗ ಆಯತಪ್ಪಿ ಕೊಳಚೆ ನೀರು ಸಂಸ್ಕರಣಾ ಘಟಕ (STP) ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ದೊಡ್ಡತೊಗುರಿನ ಸೆಲೆಬ್ರಿಟಿ ಪ್ಯಾರಡೈಸ್ ಲೇಔಟ್ ನಲ್ಲಿ ಈ ಒಂದು ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಡಾರ್ಜೆಲಿಂಗ್ ಮೂಲದ ಎಲಿನ ಲೇಪ್ಜ (10) ಎಂಬ ಬಾಲಕಿ ಮೃತ ದುರ್ದೈವಿ. ಸುರಕ್ಷತಾ ಕ್ರಮವಾಗಿ ಎಸ್ ಟೀ ಪಿ ಟ್ಯಾಂಕ್ ಗೆ ಯಾವುದೇ ಪೆನ್ಸಿಂಗ್ ಹಾಕಿರಲಿಲ್ಲ. ಆಟವಾಡುತ್ತ ಎಸ್ ಟಿ ಪಿ ಬಳಿ ಹೋದಾಗ ಆಯತಪ್ಪಿ ಬಾಲಕಿ ಸಾವನ್ನಪ್ಪಿದ್ದಾಳೆ. ಅಪಾರ್ಟ್ಮೆಂಟ್ನ ಆಡಳಿತ ಮಂಡಳಿಯ ನಿರ್ಲಕ್ಷದಿಂದ ಇದೀಗ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ.
ಸದ್ಯ ಮಗುವಿನ ಮೃತ ದೇಹವನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇದೀಗ ಪುತ್ರಿಯನ್ನು ಕಳೆದುಕೊಂಡ m ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ..