ಬೆಂಗಳೂರು : ಕುರಿ ಮಾಂಸದ ಜೊತೆ ನಾಯಿ ಮಾಂಸ ಬೆರೆಸಿದ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಲ್ಯಾಬ್ ರಿಪೋರ್ಟ್ ನಲ್ಲಿ ಮೇಕೆ ಮಾಂಸ ಅನ್ನೋದು ಇದೀಗ ದೃಢವಾಗಿದೆ. ಈ ಕುರಿತು ಆಹಾರ ಇಲಾಖೆಯು ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಪ್ರಕಟಿಸಿದೆ.
ಹೌದು ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಾಂಸ ವಶಕ್ಕೆ ಪಡೆದು ಪರಿಶೀಲನೆ ಮಾಡಿದ ಆಹಾರ ಸುರಕ್ಷತಾ ಇಲಾಖೆಯು ಎಲ್ಲ ಬಾಕ್ಸ್‌ನಲ್ಲಿರುವುದು ಕುರಿ ಮಾಂಸ ಎಂದು ಪರೀಕ್ಷಾ ವರದಿ ನೀಡಿದೆ.
ಶಿರೋಹಿ ತಳಿಯ ಮೇಕೆ ಮಾಂಸ ಅಂತ ವರದಿಯಲ್ಲಿ ತಿಳಿಸಿದೆ. ನಾಯಿ ಮಾಂಸ ಅಲ್ಲ ಅದು ಕುರಿ ಮಾಂಸ ಅಂತ ಆಹಾರ ಇಲಾಖೆ ವರದಿ ಬಿಡುಗಡೆ ಮಾಡಿದೆ. ನಾಯಿ ಮಾಂಸವನ್ನು ತರಿಸಲಾಗುತ್ತದೆ ಎಂದು ಆರೋಪಿಸಲಾಗಿತ್ತು.ಈ ಕುರಿತು ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಗಂಭೀರ ಆರೋಪ ಮಾಡಿದ್ದರು. ನಾಯಿ ಮಾಂಸ ಬೆರಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಆ ಮಾಂಸವನ್ನು ಟೆಸ್ಟಿಂಗ್ ಗೆ ಕಳುಹಿಸಲಾಗಿತ್ತು.
ಹೈದರಾಬಾದ್ನ ಲ್ಯಾಬ್ ಗೆ ಆಹಾರ ಇಲಾಖೆ ಸ್ಯಾಂಪಲ್ ಕಳುಹಿಸಿತ್ತು ಸದ್ಯ ಲ್ಯಾಬ್ ರಿಪೋರ್ಟ್ ನಲ್ಲಿ ಮೇಕೆ ಮಾಂಸ ಅನ್ನೋದು ದೃಢವಾಗಿದೆ. ಮಾಂಸದ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಇದೀಗ ಸ್ಪಷ್ಟನೆ ನೀಡಿದೆ.