ಬೆಂಗಳೂರು : ಮನೆಯ ಕಿಟಕಿಯ ಬಳಿ ನಿಂತು ಮಹಿಳೆಯ ಮುಂದೇನೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಮೂರು ಅಪ್ರಾಪ್ತ ಬಾಲಕರು ಸೇರಿದಂತೆ ಐವರು ಕಿಡಿಗೇಡಿಗಳನ್ನು ಪ್ರತ್ಯೇಕವಾಗಿ ಪುಲಕೇಶಿನಗರ ಹಾಗೂ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ‘ಫೀಡರ್’ ಬಸ್ ಬರುವ ಸಮಯ, ಸ್ಥಳದ ಕುರಿತು ಮಾಹಿತಿ ಬೇಕೇ? ಅದಕ್ಕಾಗಿ ಹೀಗೆ ಮಾಡಿ
ರೈಲ್ವೆ ಹಳಿಗಳ ಸಮೀಪದ ಮನೆಯೊಂದರ ಕಿಟಕಿಯ ಬಳಿ ನಿಂತು ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಮೇರೆಗೆ ಗಾರೆ ಕೆಲಸಗಾರ ಬಾಳಪ್ಪನನ್ನು ಪುಲಕೇಶಿನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.ಕೆಂಗೇರಿ ನಿವಾಸಿ ಬಾಳಪ್ಪ, ರಾಜೇಂದ್ರ ನಗರದ ವಿನೋದ್ ಹಾಗೂ ಮೂವರು ಅಪ್ರಾಪ್ತರು ಬಾಲಕರು ಬಂಧಿತರಾಗಿದ್ದು, ಇವರ ವಿರುದ್ಧ ಸಂತ್ರಸ್ತೆಯರು ನೀಡಿದ ದೂರಿನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
US Election 2024: ದಕ್ಷಿಣ ಕೆರೊಲಿನಾ ಪ್ರೈಮರಿಯಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭರ್ಜರಿ ಗೆಲುವು
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬಾಳಪ್ಪ, ಕೆಂಗೇರಿಯಲ್ಲಿ ವಾಸವಾಗಿದ್ದ. ಹಲವು ದಿನಗಳಿಂದ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆತ, ಇತ್ತೀಚೆಗೆ ಕೆಲಸದ ನಿಮಿತ್ತ ಪುಲಕೇಶಿನಗರಕ್ಕೆ ಬಂದಿದ್ದ. ಆ ವೇಳೆ ರೈಲ್ವೆ ಹಳಿಗಳ ಸಮೀಪದ ಮನೆ ಬಳಿ ನಿಂತು ಗೃಹಿಣಿ ಕಡೆ ಪ್ಯಾಂಟ್ ಬಿಚ್ಚಿ ಅಸಹ್ಯವಾಗಿ ಬಾಳಪ್ಪ ನಡೆದುಕೊಂಡಿದ್ದ. ಈ ಅಸಭ್ಯ ನಡವಳಿಕೆಯ ಸಹಿಸಲಾರದೆ ಪುಲಕೇಶಿ ನಗರ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
One Nation One Election: ‘ಕೋವಿಂದ್ ಸಮಿತಿ’ಯಿಂದ ಉನ್ನತ ಮಟ್ಟದ ಸಭೆ