ಚಿಕ್ಕಮಗಳೂರು : ಚಿಕ್ಕಮಗಳೂರು ಭಾಗದಲ್ಲಿ ನಕ್ಸಲ ಚಟುವಟಿಕೆ ಹಿನ್ನೆಲೆಯಲ್ಲಿ ಇಂದು ಪೊಲೀಸರು ಹಾಗೂ ನಕ್ಸಲ್ ವಿಕ್ರಂ ಗೌಡ ಮಧ್ಯ ಗುಂಡಿನ ಚಿಕಮಕಿ ನಡೆದಿದ್ದು ಇದರಲ್ಲಿ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ ಆದರೆ ಅವರ ಜೊತೆಗಿದ್ದ ಮೂವರು ಪರಾರಿ ಯಾಗಿದ್ದು ಇದೀಗ ಗುಂಡಗಾರು ಲತಾ ಜಯಣ್ಣ ಸೇರಿದಂತೆ ಮೂವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೌದು ಮುಂಡಗಾರು ಲತಾ, ಜಯಣ್ಣ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಇದೀಗ ಮೂವರ ವಿರುದ್ಧ FIR ದಾಖಲಾಗಿದೆ. UAPA 1967 ಅಡಿ 329 (4) 351(2) 61(2) 147 BNS 25 B ಶಾಸ್ತ್ರಸ್ತ್ರ ಕಾಯಿದೆ 110, 13, 16,18, 20 38ರ ಅಡಿ ಪ್ರಕರಣ ದಾಖಲಾಗಿದೆ. ನಕ್ಸಲರು ಪ್ರಯಾರಿಯಾದ ಸ್ಥಳದಲ್ಲಿ ಶಾಸ್ತ್ರಸ್ತ್ರ, ಮೂರು ಎಸ್ ಬಿ ಎಂ ಎಲ್ ಬಂದೂಕು ಹಾಗೂ ಮದ್ದು ಗುಂಡುಗಳು ಪತ್ತೆಯಾಗಿದ್ದವು.
ಮುಂಡಗಾರು ಲತಾ ಮತ್ತು ತಂಡ ಸುಬ್ಬೆಗೌಡ ಮನೆಗೆ ಭೇಟಿ ನೀಡಿತ್ತು. ಕಡೆಗುಂಡಿ ಗ್ರಾಮದ ನೀರಿನ ಪ್ರದೇಶದಲ್ಲಿ ನಕ್ಸಲರು ಪರಾರಿಯಾಗಿದ್ದರು. ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮ. ನಾಪತ್ತೆಯಾದ ಮುಂಡಗರು ಲತಾ ತಂಡಕ್ಕಾಗಿ ಇದೀಗ ಶೋಧಕಾರ್ಯ ಮುಂದುವರೆದಿದೆ.
ನಕ್ಸಲರ ಶರಣಾಗತಿಗೆ ಈ ಹಿಂದೆ ಹಲವು ಅವಕಾಶವನ್ನು ಸರ್ಕಾರ ನೀಡಿತ್ತು. ನಕ್ಸಲ್ ಶರಣಾಗತಿಗೆ ಪ್ಯಾಕೇಜ್ ಅನ್ನು ಕರ್ನಾಟಕ ಸರ್ಕಾರ ನೀಡಿತ್ತು. ಬಂದೂಕು ಬಿಟ್ಟು ಮುಖ್ಯ ವಾಹಿನಿಗೆ ಬರಲು ಅವಕಾಶ ನೀಡಿತ್ತು. ದಿವಂಗತ ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯವಾಹಿನಿಗೆ ತರಲು ತಂಡ ರಚನೆ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರದ ಪ್ಯಾಕೇಜ್ ಒಪ್ಪಿ 7 ನಕ್ಸಲರು ಶರಣಾಗಿದ್ದರು.
2013 ಮತ್ತು 14ರಲ್ಲಿ ಕಾಂಗ್ರೆಸ್ ನಕ್ಷೆ ಪ್ಯಾಕೇಜ್ ಅನ್ನು ರಚಿಸಿತ್ತು 2013-14ರಲ್ಲಿ ಶರಣಾಗಿದ್ದ ನೂರ್ ಶ್ರೀಧರ್ ಹಾಗೂ ಸಿರಿಮನೆ ನಾಗರಾಜ್ ಹಾಗು 2014 ಮತ್ತು 15ರಲ್ಲಿ ನೀಲಗುಳಿ ಪದ್ಮನಾಭ, ರೇಣುಕಾ ದಂಪತಿ 2017ರಲ್ಲಿ ಚೆನ್ನಮ್ಮ ಕನ್ಯಾಕುಮಾರಿ ಹಾಗೂ ಶಿವು ಶರಣಾಗತಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ 7 ನಕ್ಸಲರು ಶರಣಾಗಿದ್ದರು. ಇದೀಗ ನಕ್ಸಲರ ಶೋಧಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.